newsics.com
ಎಲ್ಲ ದೇಶಗಳಿಗೂ ಬ್ಯಾಂಕ್ ಎನ್ನುವುದು ಒಂದು ಅತ್ಯಗತ್ಯವಾಗಿದೆ. ಆದರೆ ಈ ದೇಶದಲ್ಲಿ ಒಂದೇ ಒಂದು ಬ್ಯಾಂಕ್ ಇರುವುದು. ಎಲ್ಲಿ ಎಲ್ಲಾ ವ್ಯವಹಾರಗಳು ಕ್ಯಾಶ್ನಲ್ಲಿ ನಡೆಯುತ್ತದೆ. ಒಂದೇ ಒಂದು ಎಟಿಎಂ ಕೇಂದ್ರ ನಿಮಗೆ ಕಾಣಲು ಸಿಗುವುದಿಲ್ಲ. ಹಾಗದರೆ ಆ ದೇಶ ಯಾವುದು?
ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಈ ಪುಟ್ಟ ದ್ವೀಪ ರಾಷ್ಟ್ರವಾದ ತುವಾಲು.ಇಲ್ಲಿ ಇರೋದು ಕೇವಲ 11 ರಿಂದ 12 ಸಾವಿರದಷ್ಟು ಜನಸಂಖ್ಯೆ. ಇಡೀ ದೇಶಕ್ಕೆ ಇರೋದು ಒಂದೇ ಒಂದು ಬ್ಯಾಂಕ್, ಅದು ನ್ಯಾಷನಲ್ಬ್ಯಾಂಕ್ ಆವಲ್ ತುವಾಲು. ತುವಾಲು ವಿಶ್ವದ ಅತ್ಯಂತ ಪುಟ್ಟ ರಾಷ್ಟ್ರಗಳಲ್ಲಿ 4ನೇ ಸ್ಥಾನದಲ್ಲಿದೆ.
ತುವಾಲು ಒಟ್ಟು 9 ಸಣ್ಣ ಹವಳದ ದ್ವೀಪಗಳನ್ನು ಒಳಗೊಂಡಿದೆ. ಇದರ ಉತ್ತರರ ಭಾಗ ಹವಾಯಿ ದ್ವೀಪಕ್ಕೆ ಮತ್ತು ದಕ್ಷಿಣ ಭಾಗ ಆಸ್ಟ್ರೇಲಿಯಾದ ನೈರುತ್ಯ ಭಾಗಕ್ಕೆ ತಾಗುತ್ತದೆ. ಈ ತುವಾಲು ದ್ವೀಪದ ಒಟ್ಟು ವಿಸ್ತಾರ 26 ಸ್ಕ್ವೇರ್ ಕಿಲೋ ಮೀಟರ್ ಎಂದು ಹೇಳಲಾಗುತ್ತದೆ. ಇಲ್ಲಿಯ ಜನರ ಪ್ರಮುಖ ಆದಾಯ ಮೀನುಗಾರಿಗೆ, ವಿದೇಶಿಗಳೊಂದಿಗಿರುವ ವ್ಯಾಪಾರ ಒಪ್ಪಂದ ಮತ್ತು ಇಂಟರ್ನೆಟ್ ಡೊಮೈನ್ ಟಿವಿಯ ರಫ್ತಿನಿಂದ ಗಳಿಸುತ್ತದೆ.ನ್ಯಾಷನಲ್ ಬ್ಯಾಂಕ್ ಆಫ್ ತುವಾಲು 1980ರಲ್ಲಿ ಸ್ಥಾಪನೆಯಾಗಿದೆ. ಇದು ದ್ವೀಪರಾಷ್ಟ್ರದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ.ಜಗತ್ತಿನಲ್ಲಿ ಎಟಿಎಂ ಕೇಂದ್ರಗಳಿಲ್ಲದೇ ಕೇವಲ ಕ್ಯಾಶ್ನಲ್ಲಿ ವ್ಯವಹರಿಸುವ ಏಕೈಕ ಬ್ಯಾಂಕ್ ಇದಾಗಿದೆ.