newsics.com
ಕಲಬುರಗಿ: ಅತ್ತೆ ಮನೆಯಲ್ಲೇ ಕಳ್ಳತನ ಮಾಡಿ ನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕಾಳಗಿಯಲ್ಲಿ ನಡೆದಿದೆ.
ಅತ್ತೆ ಸಿದ್ದಮ್ಮ ಜಮೀನು ಖರೀದಿಸುವ ಸಲುವಾಗಿ 11 ಲಕ್ಷ ರೂಪಾಯಿ ಮನೆಯ ಟ್ರಂಕ್ನಲ್ಲಿ ಇಟ್ಟಿದ್ದಳು. ಅದೇ ಮನೆಯಲ್ಲಿ ಕುಟುಂಬ ಸಮೇತವಾಗಿ ಆಕೆಯ ಸೋದರಳಿಯ ಮೀನಪ್ಪ ವಾಸವಿದ್ದ. ಹೀಗೆ ಮಾರ್ಚ್ 28ರಂದು ಮನೆಯ ಟ್ರಂಕ್ನಲ್ಲಿ ಇಟ್ಟಿದ್ದ 11 ಲಕ್ಷ ರೂಪಾಯಿಯನ್ನು ಅಳಿಯ ಮೀನಪ್ಪ ಕಳ್ಳತನ ಮಾಡಿದ್ದಾನೆ. ಹೀಗೆ ಮನೆಯಲ್ಲಿ ಇಟ್ಟಿದ್ದ 11 ಲಕ್ಷ ರೂಪಾಯಿಯನ್ನು ಎಗರಿಸಿ ಕಳ್ಳತನದ ಕಥೆ ಕಟ್ಟಿದ್ದಾನೆ.
ಹಣ ತಾನೆ ಕದ್ದಿದ್ದರೂ ಅಕ್ಕ ಪಕ್ಕದ ಮನೆಯವರ ಮೇಲೆ ಅನುಮಾನ ಬರುವಂತೆ ಅತ್ತೆ ಮುಂದೆ ಅಳಿಯ ಮೀನಪ್ಪ ಮಾತಾಡಿದ್ದಾನೆ. ಎಷ್ಟು ಹುಡುಕಿದರೂ ಹಣ ಕಳೆದುಕೊಂಡ ಸಿದ್ದಮ್ಮ ಕಾಳಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಹಣ ಕಳುವಾದ ದಿನ ಮಧ್ಯಾಹ್ನ ಸಿದ್ದಮ್ಮನ ಮನೆಗೆ ಮೀನಪ್ಪ ಹೋಗಿ ಬಂದಿದ್ದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಮೀನಪ್ಪ ಸತ್ಯ ಬಾಯಿಬಿಟ್ಟಿದ್ದಾನೆ.