Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಉದ್ಯೋಗಿಯನ್ನ ನಾಯಿಯಂತೆ ನಡೆಸಿಕೊಂಡ ಮ್ಯಾನೇಜರ್!: ಘಟನೆಗೆ ಟ್ವಿಸ್ಟ್
ದೇಶ

ಉದ್ಯೋಗಿಯನ್ನ ನಾಯಿಯಂತೆ ನಡೆಸಿಕೊಂಡ ಮ್ಯಾನೇಜರ್!: ಘಟನೆಗೆ ಟ್ವಿಸ್ಟ್

Share
2 Min Read
SHARE

newsics.com
ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಯುವಕನಿಗೆ ನಾಯಿಯಂತೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು,. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ‌ ಎನ್ನಲಾಗಿದೆ. ಸದ್ಯ ಈ ಘಟನೆಯಲ್ಲಿ ಟ್ವಿಸ್ಟ್ ಸಿಕ್ಕಿವೆ.

ಹೌದು, ಕುತ್ತಿಗೆಗೆ ಬೆಲ್ಟ್ ಹಾಕಿ ಯುವಕರನ್ನು ನಾಯಿಯಂತೆ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಖಾಸಗಿ ಮಾರ್ಕೆಟಿಂಗ್ ಸಂಸ್ಥೆ ಟಾರ್ಗೆಟ್ ಮುಟ್ಟದ ಯುವಕರಿಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ.

ಇದೂ ಸೇರಿದಂತೆ ಕ್ರೂರ ಶಿಕ್ಷೆಗಳನ್ನು ಸಂಸ್ಥೆಯಲ್ಲಿ ಅನುಭವಿಸಿದ್ದೇನೆ ಎಂದು ಕೆಲವು ತಿಂಗಳ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಫೋರ್ಟ್ ಕೊಚ್ಚಿಯ ಅಖಿಲ್ ಆರೋಪಿಸಿದ್ದಾರೆ. ಆದರೆ, ಅಲ್ಲಿ ನಡೆದದ್ದು ಕೆಲಸದ ಕಿರುಕುಳ ಅಲ್ಲವೆಂದು, ಈ ವೈರಲ್ ವಿಡಿಯೋದ ದೃಶ್ಯಗಳಲ್ಲಿ ಕಾಣುವ ಯುವಕ ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ಪ್ರಾಥಮಿಕ ಹೇಳಿಕೆ ನೀಡಿದ್ದಾನೆ.

ಕೊಚ್ಚಿ ಪಾಲಾರಿವಟ್ಟಂ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಸಂಸ್ಥೆ ಮತ್ತು ಇವರ ಪೆರುಂಬಾವೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೀಲರ್‌ಶಿಪ್ ಸಂಸ್ಥೆಯಾದ ಕೆಲ್ಟ್ರೋಕೋಪಿ ವಿರುದ್ಧ ಆರೋಪ ಕೇಳಿ ಬಂದಿದೆ. ಕೂಡಲೇ ಕಾರ್ಮಿಕ ಇಲಾಖೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಿಂದೂಸ್ತಾನ್ ಪವರ್ ಲಿಂಕ್ಸ್‌ಗೆ ಈ ಘಟನೆಗೂ ಸಂಬಂಧವಿಲ್ಲ ಎಂದು ಪಾಲಾರಿವಟ್ಟಂ ಪೊಲೀಸರು ತಿಳಿಸಿದ್ದಾರೆ. ನಂತರ ಪೆರುಂಬಾವೂರಿನಲ್ಲಿ ನಡೆಸಿದ ತನಿಖೆಯಲ್ಲಿ ಘಟನೆಗೆ ತಿರುವು ಸಿಕ್ಕಿದೆ.

ನಡೆದದ್ದು ಕೆಲಸದ ಕಿರುಕುಳ ಅಲ್ಲ ಎಂದು ದೃಶ್ಯಗಳಲ್ಲಿ ಕಾಣುವ ಯುವಕ ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದಾನೆ. ಗಾಂಜಾ ವ್ಯಸನಿಯಾದ ಮನಾಫ್ ಎಂಬ ಉದ್ಯೋಗಿ ತಿಂಗಳುಗಳ ಹಿಂದೆ ಬಲವಂತವಾಗಿ ಚಿತ್ರೀಕರಿಸಿದ ವಿಡಿಯೋ ಇದು. ಸಂಸ್ಥೆಯ ಮಾಲೀಕರನ್ನು ಕೆಟ್ಟವರನ್ನಾಗಿ ಮಾಡಲು ಈಗ ನನ್ನ ಅನುಮತಿ ಇಲ್ಲದೆ ದೃಶ್ಯಗಳನ್ನು ಹರಿಬಿಟ್ಟಿದ್ದಾನೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಕ್ರೂರವಾಗಿ ವರ್ತಿಸಿದ ಮನಾಫ್‌ನನ್ನು ಈ ಹಿಂದೆಯೇ ಸಂಸ್ಥೆಯ ಮಾಲೀಕರು ಕೆಲಸದಿಂದ ತೆಗೆದು ಹಾಕಿದ್ದರು. ನಾನು ಈಗಲೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಯುವಕ ಹೇಳುತ್ತಾನೆ. ಹೆಚ್ಚಿನ ಉದ್ಯೋಗಿಗಳಿಂದ ಹೇಳಿಕೆ ಪಡೆದ ನಂತರ ಮುಂದಿನ ದಿನಗಳಲ್ಲಿ ವಿಸ್ತೃತ ವರದಿಯನ್ನು ಕಾರ್ಮಿಕ ಇಲಾಖೆ ಸಚಿವರಿಗೆ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Fake doctor ಶಸ್ತ್ರಚಿಕಿತ್ಸೆ ಮಾಡಿ 7 ಜನರ ಜೀವ ತೆಗೆದ ನಕಲಿ ವೈದ್ಯ

TAGGED:Manager treated employee like a dog!: A twist to the incident
Share This Article
Facebook Twitter Copy Link Print
Previous Article Fake doctor ಶಸ್ತ್ರಚಿಕಿತ್ಸೆ ಮಾಡಿ 7 ಜನರ ಜೀವ ತೆಗೆದ ನಕಲಿ ವೈದ್ಯ
Next Article Viral ಕೆಲಸಕ್ಕೆ ರಜೆ ಹಾಕಲು ಯಾವ ರೀತಿ ಮೇಕಪ್ ಮಾಡಬೇಕೆಂದು ಐಡಿಯಾ ನೀಡಿದ ಮಹಿಳೆ!

Popular Posts

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read
ದೇಶಕರ್ನಾಟಕಪ್ರಮುಖ

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read
ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?