ಚಾಮರಾಜನಗರದಲ್ಲಿ ರೋಗಿಯನ್ನು ಡೋಲಿ ಮೂಲಕ ಆಸ್ಪತ್ರೆಗೆ ಸಾಗಿಸಿದ ಜನ

newsics.com ಚಾಮರಾಜನಗರ: ಅನಾರೋಗ್ಯ ಪೀಡಿತನನ್ನು ಡೋಲಿಯ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತುಳಸಿಕೆರೆ ಎಂಬ ಗ್ರಾಮದಲ್ಲಿ ನಡೆದಿದೆ. ರಸ್ತೆ ಇಲ್ಲದೆ ಅಂಬುಲೆನ್ಸ್ ಬಾರದ ಕಾರಣ ರೋಗಿ ಮತ್ತು ಸ್ಥಳೀಯರು ಪರದಾಟ ನಡೆಸಿದ್ದಾರೆ. ಹನೂರು ತಾಲೂಕಿನ ತುಳಸಿಕೆರೆ ಗ್ರಾಮದಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಬಳಲಿ ನಿತ್ರಾಣರಾಗಿದ್ದ ಪುಟ್ಟ ಎಂಬ ವ್ಯಕ್ತಿಯನ್ನು 8 ಕಿಲೋಮೀಟರ್ ವರೆಗೂ ಹೊತ್ತುಕೊಂಡು ಜನರು ತಮಿಳುನಾಡಿನ ಗೋಳಮತ್ತುರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮಕ್ಕೆ ಸೌಕರ್ಯ ಕಲ್ಪಿಸುವಂತೆ ಇದೀಗ ಜನರು … Continue reading ಚಾಮರಾಜನಗರದಲ್ಲಿ ರೋಗಿಯನ್ನು ಡೋಲಿ ಮೂಲಕ ಆಸ್ಪತ್ರೆಗೆ ಸಾಗಿಸಿದ ಜನ