MUDA Scam ಸಿಎಂಗೆ ಮುಗಿಯದ ಮುಡಾ ಸಂಕಷ್ಟ!ಇಡಿಯಿಂದ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಕೆ

newsics.com ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಮುಡಾ ಸಂಕಷ್ಟ ಎದುರಾಗಿದೆ.ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖಾ ವರದಿ ತಿರಸ್ಕರಿಸುವಂತೆ ಕೋರಿ ಇಡಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಒಟ್ಟು 8 ಪುಟಗಳ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿಗಳಿವೆ. ನಮ್ಮ ತನಿಖೆಯಲ್ಲಿ ಅವರ ತಪ್ಪುಗಳು ಸಾಬೀತಾಗಿವೆ. ಹೀಗಾಗಿ ಲೋಕಾಯುಕ್ತ ವರದಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದೆ ಎಂದು ತಿಳಿದುಬಂದಿದೆ. https://www.newsics.com/2025/04/02/congress-government-cm-dcm-to-travel-to-delhi-cabinet-reshuffle-to-be-discussed/