newsics.com
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ಗೆ ಈಗ 34ರ ಹರೆಯ. ಒಂದರ ಬೆನ್ನಲ್ಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.ಈಗ ಕಾರ್ತಿಕ್ ಆರ್ಯನ್ ಅವರು ಹೊಸ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಒಂದು ವಿಡಿಯೋ ವೈರಲ್ ಆಗಿದೆ. ವೇದಿಕೆ ಮೇಲೆ ವ್ಯಕ್ತಿಯೊಬ್ಬನ ಮೇಲೆ ಕಾರ್ತಿಕ್ ಆರ್ಯನ್ ಅವರು ಗಿಟಾರ್ ಹಿಡಿದು ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ನಟಿಸುತ್ತಿರುವ ಸಿನಿಮಾದ ಶೂಟಿಂಗ್ ಸೆಟ್ನಿಂದ ಕೆಲವು ವಿಡಿಯೋಗಳು ಲೀಕ್ ಆಗಿವೆ.ಮೊದಲ ವಿಡಿಯೋದಲ್ಲಿ ಕಾರ್ತಿಕ್ ಆರ್ಯನ್ ಅವರು ಗಿಟಾರ್ ನಡಿಸುತ್ತಾ, ವೇದಿಕೆಯಲ್ಲಿ ಹಾಡುತ್ತಿರುವ ದೃಶ್ಯವಿದೆ. ಅವರ ಹಿಂದೆ ಶ್ರೀಲೀಲಾ ಕೂಡ ಗಿಟಾರ್ ಹಿಡಿದು ನಿಂತಿದ್ದಾರೆ. ನಿರ್ದೇಶಕ ಅನುರಾಗ್ ಬಸು ಅವರು ವೇದಿಕೆ ಮುಂಭಾಗ ನಿಂತಿರುವ ಪ್ರೇಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕಾರ್ತಿಕ್ ಆರ್ಯನ್ ಅವರು ವ್ಯಕ್ತಿಯೊಬ್ಬನಿಗೆ ಗಿಟಾರ್ನಿಂದ ಹೊಡೆಯುತ್ತಾರೆ. ಬಳಿಕ ಆತನಿಗೆ ಒದ್ದು ವೇದಿಕೆಯಿಂದ ಕೆಳಗೆ ಬೀಳಿಸುತ್ತಾರೆ. ಇದು ರಿಯಲ್ ಅಲ್ಲ. ಸಿನಿಮಾ ಶೂಟಿಂಗ್ ಅಷ್ಟೇ. ಶೂಟಿಂಗ್ ಸೆಟ್ನಿಂದ ಈ ರೀತಿ ವಿಡಿಯೋ ಲೀಕ್ ಆಗಿರುವುದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
https://x.com/moviereview1684/status/1906947819405279622
https://www.newsics.com/2025/04/01/self-proclaimed-godman-nithyananda-swami-passes-away/