newsics.com
ನವದೆಹಲಿ : 15 ವರ್ಷದ ಬಾಲಕ ಮಗುವಿನ ಮೇಲೆ ಕಾರು ಹರಿಸಿರುವ ಘಟನೆ ಮಧ್ಯ ದೆಹಲಿಯ ಪಹರ್ಗಂಜ್ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಕಪ್ಪು ಬಣ್ಣದ ಹ್ಯುಂಡೈ ಕಾರನ್ನು ಚಲಾಯಿಸುತ್ತಿದ್ದ 15 ವರ್ಷದ ಬಾಲಕ ತನ್ನ ಮನೆಯ ಹೊರಗೆ ಬೀದಿಯಲ್ಲಿ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಕಾರು ಹರಿಸಿದ್ದಾನೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕಾರು ನಿಧಾನವಾಗಿ ಮಗುವನ್ನು ಸಮೀಪಿಸಿ, ಸುಮಾರು ಒಂದು ಮೀಟರ್ ದೂರದಲ್ಲಿ ನಿಂತಿರುವುದನ್ನು ತೋರಿಸಿದೆ. ನಂತರ ಅದು ಮತ್ತೆ ಚಲಿಸಲು ಪ್ರಾರಂಭಿಸಿತು, ಪರಿಣಾಮ ಮಗುವಿನ ಮೇಲೆ ಕಾರಿನ ಚಕ್ರ ಹರಿದಿದೆ.
ಸ್ಥಳೀಯ ನಿವಾಸಿಗಳು ಧಾವಿಸಿ ಮಗುವನ್ನು ಚಕ್ರದ ಅಡಿಯಿಂದ ಹೊರತೆಗೆದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
https://x.com/THAKURANUJTOMAR/status/1906661167931805964
https://www.newsics.com/2025/04/01/our-metro-service-extended-to-watch-ipl-matches/