newsics.com
ಸಾಕಷ್ಟು ಜನ ಶ್ವಾನ ಪ್ರಿಯರಿದ್ದಾರೆ.ಅವರು ಬೀದಿ ನಾಯಿಗಳನ್ನು ಕೂಡ ಇಷ್ಟಪಡುತ್ತಾರೆ. ಬೀದಿ ನಾಯಿಯನ್ನು ಮುದ್ದಾಡುತ್ತಿದ್ದ ವಾಚ್‌ಮ್ಯಾನ್ ಮೇಲೆ ಇನ್ನೊಂದು ಶ್ವಾನ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ, ಹರಸಾಹಸ ಪಟ್ಟು ಶ್ವಾನದ ಅಟ್ಯಾಕ್‌ನಿಂದ ವಾಚ್‌ಮ್ಯಾನ್ ಬಚಾವಾಗಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಕಟ್ಟಡದ ಹೊರ ಭಾಗದಲ್ಲಿ ಒಂದಷ್ಟು ಶ್ವಾನಗಳು ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ವಾಚ್‌ಮ್ಯಾನ್ ಒಂದು ನಾಯಿಯನ್ನು ಮುದ್ದಾಡಿದ್ದಾರೆ. ಆವಾಗ ಪಕ್ಕದಲ್ಲಿ ಇದ್ದ ಮತ್ತೊಂದು ಶ್ವಾನ ವಾಚ್‌ಮ್ಯಾನ್ ಮೇಲೆ ಏಕಾಏಕಿ ದಾಳಿ ನಡೆಸಿ ಕೈಯನ್ನು ಕಚ್ಚಿ ಹಿಡಿದು ಎಳೆದಾಡಿದೆ.
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶ್ವಾನವೊಂದು ವಾಚ್‌ಮ್ಯಾನ್ ಮೇಲೆ ಏಕಾಏಕಿ ದಾಳಿ ನಡೆಸಿದ ದೃಶ್ಯವನ್ನು ಕಾಣಬಹುದು. ನಾಯಿಯನ್ನು ಮುದ್ದಾಡುತ್ತಾ ನಿಂತಿದ್ದ ವೇಳೆಯೇ ಬಂದಂತಹ ಮತ್ತೊಂದು ಶ್ವಾನ ವಾಚ್‌ಮ್ಯಾನ್ ಕೈಯನ್ನು ಕಚ್ಚಿ ಎಳೆದಾಡಿದೆ. ಹಾಗೋ ಹೀಗೋ ಹೋರಾಡಿ ಆ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
https://x.com/gharkekalesh/status/1906635267660009665
https://www.newsics.com/2025/03/31/zoom-call-at-cafe-handwritten-complaint-from-unknown-person/