newsics.com
ವ್ಯಕ್ತಿಯೊರ್ವ ರಿಕ್ಷಾ ಮೇಲೆ ರೀಲ್ಸ್ ಮಾಡುತ್ತ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ವೈರಲ್ ಆಗ್ತಿದೆ.
ಚಂದ್ರಶೇಖರ್ ರಾವತ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, ಚಂದ್ರಶೇಖರ್ ರಾವತ್ ಸ್ಟೇಷನ್ ಪ್ರದೇಶದಲ್ಲಿ ಇ-ರಿಕ್ಷಾದ ಮೇಲೆ ರೀಲ್ಸ್ ಮಾಡುತ್ತಿದ್ದರು. 50 ವರ್ಷದ ಚಂದ್ರಶೇಖರ್ ರಾವತ್ ಶವಪರೀಕ್ಷಾ ಗೃಹದಲ್ಲಿ ಕೆಲಸ ಮಾಡುತ್ತಿದ್ದರು.
ಘಟನೆ ವಿವರ: ಚಂದ್ರಶೇಖರ್ ರಾವತ್ ಸ್ಟೇಷನ್ ಪ್ರದೇಶದಲ್ಲಿ ಇ-ರಿಕ್ಷಾದ ಮೇಲೆ ರೀಲ್ಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಚಾಲಕ ಇ-ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದನು, ಇದರಿಂದ ರಾವತ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾವತ್ ಅವರನ್ನು ಇ-ರಿಕ್ಷಾದಲ್ಲಿ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಇಸಿಜಿ ನಂತರ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮೃತರ ಕುಟುಂಬ ಸದಸ್ಯರಿಗೆ ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಧಾವಿಸಿದರು.
ವರದಿಗಳ ಪ್ರಕಾರ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಾರಿನಲ್ಲಿ ರೊಮ್ಯಾನ್ಸ್ ನಡೆಸುತ್ತಿದ್ದಾಗಲೇ ಸಿಕ್ಕಿ ಬಿದ್ದ ಪಿಸಿ ; ವೈರಲ್ ವಿಡಿಯೋ ನೋಡಿ