High court verdict ಉದ್ಯೋಗಿ ವಜಾಗೊಂಡರೂ ವಿಶೇಷ ರಜೆಗಳ‌ ನಗದೀಕರಣಕ್ಕಿದೆ ಅವಕಾಶ: ಹೈಕೋರ್ಟ್

newsics.com ಬೆಂಗಳೂರು: ಸೇವೆಯಿಂದ ವಜಾಗೊಂಡಿದ್ದರೂ ಉದ್ಯೋಗಿಗೂ ವಿಶೇಷ ರಜೆಗಳ ನಗದೀಕರಣಕ್ಕೆ ಅರ್ಹತೆ ಇರಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಮಾನತು ಮಾಡಿದ್ದ ಕಾರಣದಿಂದ ರಜೆ ನಗದೀಕರಣಕ್ಕೆ ಅವಕಾಶ ನೀಡದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಕ್ರಮವನ್ನು ಪ್ರಶ್ನಿಸಿ ಬ್ಯಾಂಕ್‌ನ ಮಾಜಿ ಸಹಾಯಕ ವ್ಯವಸ್ಥಾಪಕ ಜಿ. ಲಿಂಗನಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಿಶೇಷ ರಜೆ ನಗದೀಕರಣ … Continue reading High court verdict ಉದ್ಯೋಗಿ ವಜಾಗೊಂಡರೂ ವಿಶೇಷ ರಜೆಗಳ‌ ನಗದೀಕರಣಕ್ಕಿದೆ ಅವಕಾಶ: ಹೈಕೋರ್ಟ್