newsics.com
ತಿನ್ನುವ ಆಹಾರ ಪದಾರ್ಥದಲ್ಲಿ ಎಣ್ಣೆ ಹೆಚ್ಚಾಗಿ ಬಳಸುವ ಕಾರಣ ಆಗುವ ದುಷ್ಪರಿಣಾಮ ಹಾಗೂ ವಿಪರೀತ ಬೊಜ್ಜು ಅಡ್ಡಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ದೇಶದ 10 ಮಂದಿ ಪ್ರತಿಷ್ಠಿತ ವ್ಯಕ್ತಿಗಳನ್ನು ನಾಮಿನೇಟ್ ಮಾಡಲಾಗಿದ್ದು, ಸುದೀರ್ಘ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಒಂದು ದಿನದ ನಂತರ, ಜಮ್ಮು ಸಿಎಂ ಓಮರ್ ಅಬ್ದುಲ್ಲಾ , ನಂದನ್ ನೀಲೇಕಣಿ , ಮನುಭಾಕರ್ , ಆನಂದ್ ಮಹೀಂದ್ರಾ , ಮಾಧವನ್ , ಸುಧಾಮೂರ್ತಿ,ಶ್ರೇಯಾ ಘೋಷಾಲ್ ಸೇರಿದಂತೆ ಇನ್ನೂ ಕೆಲವರನ್ನು ಪಿಎಂ ಮೋದಿ ನಾಮಿನೇಟ್ ಮಾಡಿ ಈ ಅಭಿಯಾನವನ್ನು ಇನ್ನೂ 10 ಮಂದಿಗೆ ನಾಮಿನೇಟ್ ಮಾಡುವಂತೆ ಕೋರಿಕೊಂಡಿದ್ದಾರೆ.
ಹೆಚ್ಚು ಜನರಿಗೆ ಅದನ್ನು ತಲುಪಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ನಿನ್ನೆಯ #MannKiBaat ಉಲ್ಲೇಖಿಸಿದಂತೆ, ಸ್ಥೂಲಕಾಯತೆಯ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಆಹಾರದಲ್ಲಿ ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಲು ನಾನು ಈ ಕೆಳಗಿನ ಜನರನ್ನು ನಾಮನಿರ್ದೇಶನ ಮಾಡಲು ಬಯಸುತ್ತೇನೆ. ನಮ್ಮ ಆಂದೋಲನವು ದೊಡ್ಡದಾಗಲು ತಲಾ 10 ಜನರನ್ನು ನಾಮನಿರ್ದೇಶನ ಮಾಡುವಂತೆ ನಾನು ಅವರನ್ನು ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.