newsics.com
ನೀವು ಎಂದಾದರೂ 1300 ಅಡಿ ನೆಲದ ಆಳದಲ್ಲಿ ಇರುವ ಹೋಟೆಲ್ ನೋಡಿದ್ದೀರಾ?.. ಇದು ನೋಡಲು ವಿಚಿತ್ರವಾಗಿದೆ. ಏಕೆಂದರೆ ಇದು ಭೂಮಿಯ ಆಳದಲ್ಲಿ ಇರುಬ ಅತಿದೊಡ್ಡ ಹೋಟೆಲ್. ಇದು ಸುಮಾರು 1,300 ಅಡಿಗಳಷ್ಟು ನೆಲದಡಿಯಲ್ಲಿ ನೆಲೆಗೊಂಡಿರುವ ವಿಶ್ವದ ಆಳವಾದ ಹೋಟೆಲ್ ಇದಾಗಿದೆಯಂತೆ.
ವ್ಲಾಗರ್ಕಾರಾಬುಕಾನನ್ಎಂಬುವವರು ಈ ಹೋಟೆಲ್‌ಗೆ ತಂಗಲು ಹೋಗಿ ಅಲ್ಲಿರುವ ಎಲ್ಲಾ ವ್ಯವಸ್ಥೆಗಳ ವೀಡಿಯೋ ಮಾಡಿ ಅದನ್ನು ತಮ್ಮಇನ್‌ಸ್ಟಾಗ್ರಾಮ ನಲ್ಲಿ ಶೇರ್ ಮಾಡಿದ್ದಾರೆ. ‘ವಿಶ್ವದ ಆಳವಾದ ವಾಸ್ತವ್ಯ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಡೀಪ್ ಸ್ಲೀಪ್‘ ಎಂದು ಹೆಸರಿರುವ ನೆಲದಡಿಯಲ್ಲಿರುವ ವಿಶ್ವದ ಅತ್ಯಂತ ಆಳವಾದ ಹೋಟೆಲ್ ಸುಮಾರು 1,300 ಅಡಿ ಆಳದಲ್ಲಿದೆ ಮತ್ತು ಇದು ನಾರ್ತ್ ವೇಲ್ಸ್‌ನಲ್ಲಿದೆಯಂತೆ. ಅಲ್ಲಿಗೆ ಹೋಗಲು, ಕಾರಾ ಬುಕಾನನ್ ಅವರು 1800 ರ ದಶಕದಲ್ಲಿ ನಿರ್ಮಿಸಲಾದ ಹಳೆಯ ಗಣಿ ಮೂಲಕ ಪ್ರಯಾಣಿಸಬೇಕಾಗಿತ್ತು. ಆಕೆಯ ಸಾಹಸವು ಕ್ರಾಲಿಂಗ್, ಜಿಪ್–ಲೈನಿಂಗ್ ಮತ್ತು ಹೋಟೆಲ್ ತಲುಪುವ ಮೊದಲು ರ‍್ಯಾಪ್ಪೆಲಿಂಗ್ ಅನ್ನು ಒಳಗೊಂಡಿದೆ.
https://www.instagram.com/reel/DFiTGGXu7ig/?utm_source=ig_web_button_share_sheet