leapord death ಕೊನೆಗೂ ಬದುಕದ ಉರುಳಿಗೆ ಸಿಲುಕಿದ ಚಿರತೆ, ಬೇಟೆಗಾರರ ಬಂಧನಕ್ಕೆ‌ ಕ್ರಮ

newsics.com ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿದ ಚಿರತೆಯನ್ನು ಸಾವಿನಿಂದ ಕಾಪಾಡಲು ನಡೆಸಿದ ಹರಸಾಹಸ ಫಲಿಸಲಿಲ್ಲ. ಕೊನೆಗೂ ಚಿರತೆ ಬದುಕುಳಿಯಲಿಲ್ಲ. ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಕಾಫಿ ತೋಟವೊಂದರಲ್ಲಿ ಈ‌ ಘಟನೆ ನಡೆದಿದೆ. ಕಾಡುಹಂದಿ ಬೇಟೆಗೆ ಉರುಳು ಹಾಕಿದ್ದ ಬೇಟೆಗಾರರು ಘಟನೆ ಬಳಿಕ ಪರಾರಿಯಾಗಿದ್ದಾರೆ. ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಚಿರತೆಯನ್ನು ರಕ್ಷಿಸಲು ಶ್ರಮಿಸಿದ್ದರು. ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಲಾಗಿತ್ತು. ಪರಾರಿಯಾದ ಬೇಟೆಗಾರರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಅಕ್ರಮ ಬೇಟೆ ತಡೆಯಲು ಕಟ್ಟುನಿಟ್ಟಿನ ಕ್ರಮ … Continue reading leapord death ಕೊನೆಗೂ ಬದುಕದ ಉರುಳಿಗೆ ಸಿಲುಕಿದ ಚಿರತೆ, ಬೇಟೆಗಾರರ ಬಂಧನಕ್ಕೆ‌ ಕ್ರಮ