newsics.com
ರಾಯಚೂರು: ಪೇಂಟ್ಗೆ ಬಳಸುವ ಥಿನ್ನರ್ ಕುಡಿದು ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಹಿರೆಕೊಟ್ನೇಕಲ್ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಶಿವಾರ್ಜುನ ನಾಯಕ್(3) ಎಂದು ಗುರುತಿಸಲಾಗಿದೆ. ಜಾತ್ರಾ ಮಹೋತ್ಸವ ಹಿನ್ನೆಲೆ ಪೇಂಟ್ಗೆ ಕೆಲಸಕ್ಕಾಗಿ ಥಿನ್ನರ್ ತಂದಿದ್ದರು. ಈ ವೇಳೆ ಅಕಸ್ಮಾತ್ ಆಗಿ ಮನೆಯಲ್ಲಿಟ್ಟಿದ್ದ ಥಿನ್ನರ್ನ್ನು ಬಾಲಕ ಕುಡಿದಿದ್ದಾನೆ.
ಅಸ್ವಸ್ಥಗೊಂಡಿದ್ದ ಆತನನ್ನು ಕೂಡಲೇ ಮಾನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.