newsics.com
ಪೂಜೆಯ ಸಮಯದಲ್ಲಿ ಅಗರಬತ್ತಿಯನ್ನು ಹಚ್ಚುವುದರಿಂದ ಹಾನಿಕಾರಕ ಕ್ರಿಮಿಗಳು ದೂರವಾಗುತ್ತವೆ ಸೈನ್ಸ್‌ನಲ್ಲಿ ಹೇಳುತ್ತಾರೆ. ಆದರೆ ವಾರದಲ್ಲಿ ಎರಡು ದಿನ ಅಗರಬತ್ತಿ ಹಚ್ಚಬಾರದು ಎನ್ನುತ್ತಾರೆ ಜ್ಯೋತಿಷಿಗಳು.
ಪೂಜೆಯ ಸಮಯದಲ್ಲಿ ಧೂಪವನ್ನು ಹಚ್ಚುವುದು ದೇವರಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮಾರ್ಗವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿದೆ. ಇದಲ್ಲದೆ, ಅಗರಬತ್ತಿ, ಧೂಪವನ್ನು ಬೆಳಗಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕವಾಗಿ ಪರಿವರ್ತಿಸುತ್ತದೆ ಎಂದು ನಂಬಲಾಗಿದೆ.
ಪುರಾಣಗಳ ಪ್ರಕಾರ ಭಾನುವಾರದಂದು ಬಿದಿರನ್ನು ಸುಡಬಾರದು. ಇದನ್ನು ಮೀರಿಯೂ ಭಾನುವಾರ ಅಗರಬತ್ತಿಯನ್ನು ಸುಟ್ಟರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂಬುದು ಕೆಲವರ ನಂಬಿಕೆ.
ಮಂಗಳವಾರವೂ ಅಗರಬತ್ತಿ ಹಚ್ಚಬಾರದು. ಈ ರೀತಿ ಮಾಡುವುದರಿಂದ ಬಡತನ, ಜಗಳ, ಕುಟುಂಬ ಸದಸ್ಯರಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮನೆಯಲ್ಲಿ ಧೂಪದ್ರವ್ಯವನ್ನು ಬೆಳಗಿಸುವುದರಿಂದ ಮನೆಯಲ್ಲಿ ಧನಾತ್ಮಕತೆಯನ್ನು ತರುತ್ತದೆ. ಶಾಂತಿ ಇರುತ್ತದೆ.