Nettarakere ನೆತ್ತರಕೆರೆ ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿ ಅವಘಡ

newsics.com ಮಂಗಳೂರು: ನೆತ್ತರಕೆರೆ ಸಿನಿಮಾ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಶೂರ‍ಿಂಗ್ ಗಾಗಿ ಹಾಕಿದ್ದ ಬಾರ್ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. ಸಿನಿಮಾ ಚಿತ್ರೀಕರಣಕ್ಕೆ ನಿರ್ಮಿಸಿದ್ದ ಬಾರ್ ಸೆಟ್ ನ ಒಂದು ಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಕಾಂತಾರ ಸಿನಿಮಾದ ‘ಗುರುವ’ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರದ ಶೂಟಿಂಗ್ ವೇಳೆ ಈ ಅನಾಹುತ ಸಂಭವಿಸಿದೆ.