Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bigg boss Winner ನಿರೀಕ್ಷೆಯಂತೆ ಹನುಮಂತ ಬಿಗ್ ಬಾಸ್ ಕನ್ನಡ 11ರ‌ ವಿನ್ನರ್, ತ್ರಿವಿಕ್ರಮ್ ರನ್ನರ್‌ ಅಪ್
ಕರ್ನಾಟಕಪ್ರಮುಖಮನರಂಜನೆ

Bigg boss Winner ನಿರೀಕ್ಷೆಯಂತೆ ಹನುಮಂತ ಬಿಗ್ ಬಾಸ್ ಕನ್ನಡ 11ರ‌ ವಿನ್ನರ್, ತ್ರಿವಿಕ್ರಮ್ ರನ್ನರ್‌ ಅಪ್

Share
3 Min Read
SHARE

newsics.com

ನಿರೀಕ್ಷೆಯಂತೆ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿಸೊಗಡಿನ ಹನುಮಂತ ಹೊರಹೊಮ್ಮಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ ಅಯ್ಕೆಯಾಗಿದ್ದಾರೆ.

ತ್ರಿವಿಕ್ರಮ್ ಮತ್ತು ರಜತ್‌ ಅವರಿಗೆ ಟಕ್ಕರ್‌ ಕೊಟ್ಟು ಈ ಸೀಸನ್‌ನ ವಿನ್ನರ್ ಆಗಿದ್ದಾರೆ. ಟ್ರೂಫಿ ಜೊತೆಗೆ 50 ಲಕ್ಷ ರೂ ನಗದು ಬಹುಮಾನ ಕೂಡ ಗೆದ್ದಿದ್ದಾರೆ.

ಇನ್ನು ತ್ರಿವಿಕ್ರಮ್‌ ಅವರು ರನ್ನರ್ ಅಪ್‌ ಆಗಿ ಒಟ್ಟು 15 ಲಕ್ಷ ರೂ ನಗದು ಬಹುಮಾನ ಗೆದ್ದರು. ರಜತ್‌ ಕಿಶನ್‌ ಅವರು ಎರಡನೇ ರನ್ನರ್ ಅಪ್ ಆದರು. ಜತೆಗೆ 10 ಲಕ್ಷ ರೂ ನಗದು ಬಹುಮಾನ ಗೆದ್ದರು. ಮನೆಯಲ್ಲಿ ಕೊನೆಯದಾಗಿ ಉಳಿದಿದ್ದ ಮೂವರನ್ನು ಸುದೀಪ್‌ ಅವರೇ ಸ್ವತಃ ಮನೆಯೊಳಗೆ ಹೋಗಿ ಕರೆದುಕೊಂಡು ವೇದಿಕೆಗೆ ಬಂದರು.

ದೊಡ್ಡ ಆಲದಮರದ ಬಳಿಯ ಹೊಸ ಅರಮನೆಯಂಥ ಬಿಗ್ ಬಾಸ್ ಮನೆ ಆವರಣದಲ್ಲಿ ಈ ಈವೆಂಟ್ ನಡೆದಿದೆ. ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ವಿನ್ನರ್‌ ಹನುಮಂತಗೆ ಟ್ರೋಫಿ ಮತ್ತು ಬಹುಮಾನದ ಮೊತ್ತದ ಚೆಕ್ ಹಸ್ತಾಂತರಿಸಿದರು.

ಇನ್ನು ಶೋ ಗೆದ್ದ ಹನುಮಂತ ಬಿಗ್‌ಬಾಸ್‌ ಟ್ರೋಪಿ ಜೊತೆಗೆ 50 ಲಕ್ಷ ಮಾತ್ರವಲ್ಲ, ಮನೆಯಲ್ಲಿ ಇಷ್ಟು ದಿನ ಉಳಿದುಕೊಂಡ ಹಿನ್ನೆಲೆಯಲ್ಲಿ ಸಂಭಾವನೆಯನ್ನು ಕೂಡ ಪಡೆದಿದ್ದಾರೆ.

ಕಪ್ ಯಾರು ಗೆಲ್ಲುತ್ತಾರೆ, 50 ಲಕ್ಷ ರೂಪಾಯಿ ಹಣವನ್ನು ಯಾರು ತೆಗೆದುಕೊಂಡು ಹೋಗುತ್ತಾರೆ ಎಂಬ ಬಗ್ಗೆ ಚರ್ಚೆ ಜೋರಾಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿಗಳು ಕೂಡ ಹರಡಿತ್ತು. ಹನುಮಂತ ಅವರು ವಿನ್ನರ್ ಎಂದು ಅವರ ಅಭಿಮಾನಿಗಳು ಹೇಳುತ್ತಲೇ ಇದ್ದರು. ಈ ಮಧ್ಯೆ ಹನುಮಂತ ಅವರು ಬಿಗ್ ಬಾಸ್ ವಿನ್ನರ್ ಎಂದು ವಿಕಿಪೀಡಿಯಾದಲ್ಲೂ ಮಾಹಿತಿ ಅಪ್ಡೇಟ್ ಮಾಡಲಾಗಿತ್ತು. ಘೋಷಣೆಗೂ‌ ಮೊದಲೇ ಸೋರಿಕೆಯಾಗಿದ್ದ ಮಾಹಿತಿ ಕೊನೆಗೂ ನಿಜವಾಗಿದೆ.

ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದು ಫಿನಾಲೆಯಲ್ಲಿ 2 ಮತ್ತು ಮೂರನೇ ಸ್ಥಾನ ಪಡೆದು ಹನುಮ ಮತ್ತು ರಜತ್‌ ಇತಿಹಾಸ ನಿರ್ಮಿಸಿದ್ದಾರೆ. ಈವರೆಗೆ ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿ ಯಾವೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಕೂಡ ಫಿನಾಲೆ ವಾರದವರೆಗೆ ಬಂದಿರುವ ಇತಿಹಾಸವೇ ಇಲ್ಲ. ಶೋ ಆರಂಭವಾಗುವಾಗ ಇಬ್ಬರಿಗೂ ಕಿಚ್ಚ ಸುದೀಪ್‌ ಇದನ್ನು ಹೇಳಿ ಅಭಿನಂದನೆ ಕೂಡ ಸಲ್ಲಿಸಿದ್ದರು.

ಉಗ್ರಂ ಮಂಜು, ರಜತ್‌, ತ್ರಿವಿಕ್ರಮ್‌ ಅವರಿಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್‌ಗಳಲ್ಲಿ ಹನುಮಂತ ಠಕ್ಕರ್ ಕೊಟ್ಟಿದ್ದರು. ಜೊತೆಗೆ ಧನ್‌ರಾಜ್ ಅವರೊಂದಿಗಿನ ಸ್ನೇಹ ಕೂಡ ತುಂಬಾ ಹೈಲೆಟ್ಸ್ ಆಗಿತ್ತು. ಬಿಗ್‌ಬಾಸ್‌ ಪಿನಾಲೆಗೆ ಒಟ್ಟು 6 ಮಂದಿ ಸೆಲೆಕ್ಟ್ ಆಗಿದ್ದರು. ಅದರಂತೆ ಕ್ರಮವಾಗಿ ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ, ರಜತ್‌ ಮತ್ತು ತ್ರಿವಿಕ್ರಮ್‌ ಕಪ್‌ ಗೆಲ್ಲುವ ರೇಸ್‌ ನಿಂದ ಹೊರಬಿದ್ದರು.

ಒಟ್ಟು ಈ ಬಾರಿ 20 ಮಂದಿ ಸ್ಪರ್ಧಿಗಳು ಶೋನಲ್ಲಿದ್ದರು.ಇದೀಗ ಬಿಗ್ ಬಾಸ್ ಕನ್ನಡ 11ರ ಸೀಸನ್ ಗ್ರಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿ ಹನುಮಂತ ಅವರು ಕಪ್ ಗೆಲ್ಲುವ ಮೂಲಕ ಬಿಗ್ ಬಾಸ್ ಈ ಸೀಸನ್‌ಗೆ ಇತಿಶ್ರೀ ಹಾಡಲಾಯಿತು.

ಈ ಬಾರಿಯ ಬಿಗ್ ಬಾಸ್ ಶೋವನ್ನು ಹಿಂದೆಂದಿಗಿಂತಲೂ ಹೆಚ್ಚು ಜನರು ವೀಕ್ಷಿಸುವ ಮೂಲಕ ಭಾರೀ ಟಿಆರ್‌ಪಿ (TRP) ಗಳಿಸಿತ್ತು ಎನ್ನಲಾಗಿದೆ.

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾಸ್ ಈ ಬಿಗ್ ಬಾಸ್ ಸೀಸನ್ 11ನ್ನು ಆಯೋಜಿಸಿತ್ತು. ಇನ್ನು ಮುಂದಿನ ಸೀಸನ್ (12th Season) ಬರುವವರೆಗೆ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪ್ರಿಯರು ಕಾಯಲೇಬೇಕು. ಅಷ್ಟೇ ಅಲ್ಲ, ಇದು ಕಿಚ್ಚ ನಡೆಸಿಕೊಡುವ ಕೊನೆಯ ಸೀಸನ್‌ ಆಗಿದ್ದು, ಮುಂದಿನ ಸೀಸನ್‌ ಯಾರು ನಡೆಸಿಕೊಡುತ್ತಾರೆ ಎಂಬ ಕುತೂಹಲ ಜೀವಂತವಾಗಿರಲಿದೆ.

Bigg boss Kannada 11 ಕಿಚ್ಚ ಸುದೀಪ್ ಜತೆ ಬಿಗ್ ಬಾಸ್ ಧ್ವನಿ ಬಡೆಕ್ಕಿಲ ಪ್ರದೀಪ್ ವಿದಾಯ

TAGGED:As expectedHanumanta is the winner of Bigg Boss Kannada 11
Share This Article
Facebook Twitter Copy Link Print
Previous Article Bigg boss Kannada 11 ಕಿಚ್ಚ ಸುದೀಪ್ ಜತೆ ಬಿಗ್ ಬಾಸ್ ಧ್ವನಿ ಬಡೆಕ್ಕಿಲ ಪ್ರದೀಪ್ ವಿದಾಯ
Next Article ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?