Paragliding: ಗೋವಾದಲ್ಲಿ ಪ್ಯಾರಾಗ್ಲೈಡಿಂಗ್‌ ವೇಳೆ ಇಬ್ಬರು ಸಾವು

newsics.com. ಗೋವಾ : ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಇಂತಹ ಘಟನೆಯೊಂದು ಉತ್ತರ ಗೋವಾದಲ್ಲಿ ನಡೆದಿದೆ. ಪುಣೆ ನಿವಾಸಿ ಶಿವಾನಿ ಮತ್ತು ಆಕೆಯ ಇನ್‌ಸ್ಟ್ರಕ್ಟರ್ ಸುಮಲ್ ನೇಪಾಲಿ ಸಾವನ್ನಪ್ಪಿದ್ದಾರೆ. ಇನ್ನು, ಪ್ಯಾರಾಗ್ಲೈಡಿಂಗ್‌ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಂಪನಿ ಮಾಲೀಕ ಶೇಖರ್ ವಿರುದ್ಧ ಮಾಂಡ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.