Road accident ರಸ್ತೆ ಅಪಘಾತ: ಹಸೆಮಣೆ ಏರಬೇಕಾಗಿದ್ದ ಯುವತಿ ಸಾವು

newsics.com ಮಂಡ್ಯ: ಫೆಬ್ರವರಿ 18ರಂದು ಹಸೆಮಣೆ ಏರಬೇಕಾಗಿದ್ದ ಯುವತಿ ಶನಿವಾರ ಬೆಳಗ್ಗೆ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಶನಿವಾರ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹೆಚ್. ಬಸಾಪುರ ಗೇಟ್ ಬಳಿ ನಡೆದಿದೆ. ಮೂಲತಃ ಬಾಳೆಹೊನ್ನಿಗ ಗ್ರಾಮದ ವಾಸಿ ಕೃಷ್ಣೇಗೌಡರ ಮಗಳಾದ ಬಿ.ಕೆ.ಶರಣ್ಯ(26) ಕಾರ್ಯನಿಮಿತ್ತವಾಗಿ ಹಲಗೂರಿಗೆ ತಮ್ಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮಳವಳ್ಳಿ ಕಡೆಯಿಂದ ಅತಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. Bigg Boss … Continue reading Road accident ರಸ್ತೆ ಅಪಘಾತ: ಹಸೆಮಣೆ ಏರಬೇಕಾಗಿದ್ದ ಯುವತಿ ಸಾವು