newsics.com
ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲೇ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಯಾಗಿದ್ದಾರೆ. ಈ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಳೆಹೊನ್ನೂರಿನಿಂದ ಹಾಸನ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಚನ್ನರಾಯಪ್ಪಟ್ಟಣ, ಹಿರಿಸಾವೆ ಮೂಲಕ ಬೆಂಗಳೂರಿಗೆ ಶರಣಾಗತಿ ಘೋಷಿಸಿದ್ದಂತ 6 ನಕ್ಸಲರನ್ನು ಕರೆದುಕೊಂಡು ಬರಲಾಗಿತ್ತು
ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾಗೆ ಸಂಜೆ.6 ಗಂಟೆಗೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೂ ಬೇಕಿದ್ದಂತ ಮೋಸ್ಟ್ ವಾಂಟೆಂಡ್ 6 ನಕ್ಸಲರು ಆಗಮಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದಂತ ನಕ್ಸಲರು, ಆ ಬಳಿಕ ಅವರ ಸಮ್ಮುಖದಲ್ಲಿ ಶರಣಾಗತಿಯಾದರು. ಸಿಎಂ ಸಿದ್ಧರಾಮಯ್ಯ ಅವರು ಶರಣಾಗತಿಯಾದಂತ 6 ನಕ್ಸಲರಿಗೆ ಹೂ ಗುಚ್ಚ ನೀಡಿ, ಸಾರ್ವಜನಿಕ ಬದುಕಿಗೆ ಬರ ಮಾಡಿಕೊಂಡರು.