Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Death sentence ಮೂವರು ಮಕ್ಕಳನ್ನು ಹತ್ಯೆಗೈದು ಪತ್ನಿಯನ್ನು ಬಾವಿಗೆ ತಳ್ಳಿದ್ದ ಪತಿಗೆ ಗಲ್ಲು ಶಿಕ್ಷೆ ವಿಧಿಸಿದ ಮಂಗಳೂರು‌ ಕೋರ್ಟ್
ಕರ್ನಾಟಕಪ್ರಮುಖ

Death sentence ಮೂವರು ಮಕ್ಕಳನ್ನು ಹತ್ಯೆಗೈದು ಪತ್ನಿಯನ್ನು ಬಾವಿಗೆ ತಳ್ಳಿದ್ದ ಪತಿಗೆ ಗಲ್ಲು ಶಿಕ್ಷೆ ವಿಧಿಸಿದ ಮಂಗಳೂರು‌ ಕೋರ್ಟ್

Share
2 Min Read
SHARE

newsics.com

ಮಂಗಳೂರು: ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದು ಬಳಿಕ ಪತ್ನಿಯ ಕೊಲೆಗೆ ಯತ್ನಿಸಿದ್ದ ಅಪರಾಧಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ.

ಮುಲ್ಕಿ ಬಳಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಅಲಿಯಾಸ್ ಹಿತೇಶ್ ಕುಮಾರ್ (43) ಮರಣದಂಡನೆಗೊಳಗಾಗಿರುವ ಅಪರಾಧಿ.
ತಾಳಿಪಾಡಿಯ ಪದ್ಮನೂರು ಶೆಟ್ಟಿಕಾಡಿನಲ್ಲಿ 2022 ಜೂನ್ 23ರಂದು ಸಂಜೆ ಆರೋಪಿಯು ತನ್ನ 14, 11 ಮತ್ತು 4 ವರ್ಷದ ಮಕ್ಕಳನ್ನು ಮನೆಯ ಬಳಿ ಇರುವ ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಅಲ್ಲದೆ, ಕೆಲಸದಿಂದ ಮನೆಗೆ ಬಂದು ಮಕ್ಕಳನ್ನು ಹುಡುಕುತ್ತಿದ್ದ ಹೆಂಡತಿ ಲಕ್ಷ್ಮೀಯನ್ನು ಕೂಡ ಅದೇ ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ.

ಯಾವುದೇ ಕೆಲಸಕ್ಕೆ ಹೋಗದ ಹಿತೇಶ್ ಹೆಂಡತಿ, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಈ ಕೃತ್ಯ ಎಸಗಿದ್ದ. ಹೆಂಡತಿ ಮಕ್ಕಳನ್ನು ಸಾಯಿಸಿದ್ದಲ್ಲಿ ತಾನು ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ಈ ಕೃತ್ಯ ಎಸಗಿದ್ದ‌ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದರು.

ಬಾವಿಗೆ ಬಿದ್ದ ಮಕ್ಕಳು ಬಾವಿಯೊಳಗಿನ ಹಗ್ಗದಲ್ಲಿ ನೇತಾಡುವುದನ್ನು ನೋಡಿದ ಆರೋಪಿ ತಂದೆ ಹಗ್ಗವನ್ನು ತುಂಡರಿಸಿದ್ದ. ಹೆಂಡತಿಯನ್ನು ಬಾವಿಗೆ ದೂಡುವ ವೇಳೆ ಪತ್ನಿ ಈತನ ಕೈಯನ್ನು ಗಟ್ಟಿ ಹಿಡಿದ ಪರಿಣಾಮ ಈತನೂ ಬಾವಿಗೆ ಬಿದ್ದಿದ್ದ. ಬಳಿಕ ನೆರೆಹೊರೆಯವರು ಬಂದು ಇಬ್ಬರನ್ನೂ ಬಾವಿಯಿಂದ ಮೇಲಕ್ಕೆತ್ತಿದ್ದರು.
ಆರೋಪಿಯ ವಿರುದ್ಧ ಮಂಗಳೂರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಲ್ಕಿ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ್ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಕಲಂ 302, 307 ಐಪಿಸಿ ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ, ತಪ್ಪಿತಸ್ಥನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ರಡಿ ಅಪರಾಧಕ್ಕೆ ಮರಣದಂಡನೆ/ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 307ರ ಅಡಿಯ ಅಪರಾಧಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆ ವಿಧಿಸಿದ್ದಾರೆ.

ಮರಣದಂಡನೆಯನ್ನು ಹೈಕೋರ್ಟ್ ಅನುಮೋದಿಸುವವರೆಗೆ ಜಾರಿಗೊಳಿಸದಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ನೊಂದ ಮೃತ ತಾಯಿಯಾದ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.

Fire rain ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಮಳೆ: ವಾಹನ ಸವಾರರು ಕಂಗಾಲು, ವಿಡಿಯೋ ನೋಡಿ

Health Tips ನಿಮ್ಮ ಕಾಲಿನ ಆಕಾರವು ಏನು ಹೇಳುತ್ತದೆ? – ಈ ರೀತಿ ಇರೊವರು ಗುಣವಂತರು

Health Tips ಬೆಳಗ್ಗೆ ತುಪ್ಪ ಸೇವನೆ ಏಕೆ ಮಾಡಬೇಕು? ಪ್ರತಿನಿತ್ಯ ಸೇವಿಸಿದರೆ ಏನೆಲ್ಲಾ ಲಾಭ?

TAGGED:The court sentenced the father who killed three children to death
Share This Article
Facebook Twitter Copy Link Print
Previous Article ಡಿಕೆಶಿ ಬೆನ್ನಲ್ಲೇ ಹೊಸ ವರ್ಷ ಸಂಭ್ರಮಾಚರಣೆಗೆ ವಿದೇಶಕ್ಕೆ ಹಾರಿದ ಬಿಎಸ್ ವೈ: ಗೋವಾಕ್ಕೆ ತೆರಳಿದ ಹೆಚ್.ಡಿ.ಕೆ
Next Article Maternal mortality ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಮಗು ಸಾವು

Popular Posts

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್;ತಪ್ಪಿದ ದುರಂತ

0 Min Read

2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ

1 Min Read

You Might Also Like

ಕರ್ನಾಟಕಪ್ರಮುಖ

ಪ್ರೇಯಸಿಯ ಮರ್ಯಾದಾ ಹತ್ಯೆ ನೋವು ತಾಳಲಾರದೆ ಪ್ರಿಯಕನ ಆತ್ಮಹತ್ಯೆ; ಪ್ರೇಯಸಿಯ ಜನ್ಮ ದಿನದಂದೇ ಜೀವ ಅಂತ್ಯ.

1 Min Read
ಪ್ರಮುಖಕರ್ನಾಟಕ

ವಿದ್ಯಾರ್ಥಿನಿ ಜೊತೆ ಪ್ರೊಫೆಸರ್ ಲವ್ವಿಡವ್ವಿ , 3 ಬಾರಿ ಗರ್ಭಪಾತ.!

1 Min Read
ದೇಶಪ್ರಮುಖವಿದೇಶ

CJI in London ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್‌ ಭಾಷಣಕ್ಕೆ ಅಡ್ಡಿ: ಹೈಕಮಿಷನ್ ತೀವ್ರ ಆಕ್ರೋಶ

2 Min Read
ಕರ್ನಾಟಕಜ್ಯೋತಿಷ್ಯಪ್ರಮುಖ

ಕೆಟ್ಟ ಮುಹೂರ್ತದಲ್ಲಿ ಡಿಕೆ ಪ್ರಮಾಣವಚನ ಸ್ವೀಕರಿಸಿದ್ರಾ? ಕಾಂಗ್ರೆಸ್​ ಛಿದ್ರವಾಗುತ್ತಾ? ಅಧಿಕಾರಿಗಳು ಜೀವ ಕಳೆದುಕೊಳ್ತಾರಾ? ಭಯಾನಕ ಭವಿಷ್ಯವಾಣಿ ಹೇಳ್ತಿರೋದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?