Manmohan Singh passes away ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಇನ್ನಿಲ್ಲ

newsics.com ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌(92) ಇನ್ನಿಲ್ಲ. ಆರೋಗ್ಯದಲ್ಲಿ ವಯೋಸಹಜ ಏರುಪೇರು ಉಂಟಾಗಿ ಗುರುವಾರ ರಾತ್ರಿ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. 92 ವರ್ಷದ ಮಾಜಿ ಪ್ರಧಾನಿ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಅವರನ್ನು ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. 2004 ರಿಂದ 2014ರವರೆಗಿನ ಯುಪಿಎ ಮೊದಲ ಹಾಗೂ ಎರಡನೇ ಅವಧಿಯಲ್ಲಿ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಡಾ.ಮನಮೋಹನ್‌ ಸಿಂಗ್‌ 1991ರಿಂದ ರಾಜ್ಯಸಭಾ ಸದಸ್ಯರಾಗಿ ಕಳೆದ ವರ್ಷವಷ್ಟೇ ನಿವೃತ್ತಿಯಾಗಿದ್ದರು. https://www.newsics.com/2024/12/26/former-prime-minister-manmohan-singh-life-story/ದೇಶದ