newsics.com
ನವದೆಹಲಿ :ಪ್ಯಾಲೆಸ್ಟೀನ್ ಎಂಬ ಹೆಸರಿರುವ ಕೈಚಿಲದೊಂದಿಗೆ ಲೋಕಸಭೆಯ ಕಲಾಪದಲ್ಲಿ ಪಾಲ್ಗೊಂಡು ಚರ್ಚೆಗೆ ಕಾರಣವಾಗಿದ್ದ ಮರು ದಿನವೇ, ಬಾಂಗ್ಲಾದೇಶದಲ್ಲಿ ಹಿಂದೂ ಸಹಿತ ಅಲ್ಪಸಂಖ್ಯಾತರ ಪರ ಘೋಷಣೆಯುಳ್ಳ ಚೀಲ ಹಿಡಿದು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಲವಾರು ಸಂಸದರು ಮಂಗಳವಾರ ಸಂಸತ್ತಿನ ಸಂಕೀರ್ಣದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯ ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ್ದಾರೆ.
ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರೊಂದಿಗೆ ಸ್ಟ್ಯಾಂಡ್ ವಿಥ್’ ಎಂದು ಬರೆದ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿ ಧರಿಸಿ ಬಂದಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಈ ಕೈಚೀಲ ಅಭಿಯಾನದಿಂದ ಪ್ರೇರಣೆಗೊಂಡ ವಿರೋಧ ಪಕ್ಷಗಳ ಇತರ ಸಂಸದರೂ ಇಂಥದ್ದೇ ಮಾದರಿಯ ಚೀಲ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.