Minister car accident ಹಾಸನ ಸಮಾವೇಶಕ್ಕೆ ತೆರಳುತ್ತಿದ್ದ ಸಚಿವರ ಕಾರು ಡಿಕ್ಕಿ: ಮುನಿಯಪ್ಪ ಪಾರು

newsics.com ಹಾಸನ: ನಗರದಲ್ಲಿ ಆಯೋಜನೆಗೊಂಡಿರುವ ಕಾಂಗ್ರೆಸ್‌ನ ಜನ ಕಲ್ಯಾಣ ಸಮಾವೇಶಕ್ಕೆ ತೆರಳುತ್ತಿದ್ದ ಸಚಿವ ಕೆ.ಹೆಚ್. ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಎದುರುಗಡೆಯಿಂದ ಬರುತ್ತಿದ್ದ ಕಾರು ಸಚಿವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ಈ ಘಟನೆ ನಡೆದಿದೆ. ಮುನಿಯಪ್ಪ ಅವರಿದ್ದ ಕಾರು ಸಣ್ಣಪುಟ್ಟ ಡ್ಯಾಮೇಜ್ ಆಗಿದ್ದು, ಅವರು ಬೇರೆ ವಾಹನದಲ್ಲಿ ಹಾಸನ ಸಮಾವೇಶಕ್ಕೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. Devendra Fadnavis ಇಂದು … Continue reading Minister car accident ಹಾಸನ ಸಮಾವೇಶಕ್ಕೆ ತೆರಳುತ್ತಿದ್ದ ಸಚಿವರ ಕಾರು ಡಿಕ್ಕಿ: ಮುನಿಯಪ್ಪ ಪಾರು