Family Dispute ತಮ್ಮನನ್ನು ಕೊಂದು ಶವದ ಬಳಿ ಕುಳಿತು ಬೀಡಿ ಸೇದಿದ ಅಣ್ಣ!

newsics.com ಕಾರವಾರ(ಉತ್ತರ ಕನ್ನಡ): ಕುಡಿದ ಅಮಲಿನಲ್ಲಿ ತಮ್ಮನನ್ನೇ ಕೊಲೆಗೈದಿರುವ ಘಟನೆ ಹೊನ್ನಾವರ ತಾಲೂಕಿನ ಹೆಬ್ಬೈಲ್ ಗ್ರಾಮದಲ್ಲಿ ನಡೆದಿದೆ. ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ ಹೆಣದ ಮುಂದೆ ಕುಳಿತು ಬಿಡಿ ಸೇದಿದ್ದಾನೆ. ಕೌಟುಂಬಿಕ ಕಲಹ ತಮ್ಮನ ಸಾವಿನಲ್ಲಿ ಅಂತ್ಯವಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಣ್ಣ ಸುಬ್ರಾಯ್ ನಾಯ್ಕ್ ತಮ್ಮ ನಾಗೇಶ್ ನಾಯ್ಕ್(50)ನನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಅಣ್ಣನ ಮೇಲೆ ತಮ್ಮ ನಾಗೇಶ್ ನಾಯ್ಕ್ ಹಲ್ಲೆ ಮಾಡಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. … Continue reading Family Dispute ತಮ್ಮನನ್ನು ಕೊಂದು ಶವದ ಬಳಿ ಕುಳಿತು ಬೀಡಿ ಸೇದಿದ ಅಣ್ಣ!