newsics.com
ನವದೆಹಲಿ: ಬೆಂಗಳೂರಿನಲ್ಲಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ, ಸ್ಫೋಟಕ ಒದಗಿಸಲು ನೆರವು ನೀಡಿದ ಆರೋಪದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯ್ಬಾದ (ಎಲ್ಇಟಿ) ಉಗ್ರನನ್ನು ಪೂರ್ವ ಆಫ್ರಿಕಾದ ರುವಾಂಡಾದಿಂದ ಭಾರತದ ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ತಿಳಿಸಿದೆ.
ರುವಾಂಡದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ದಾದ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್‌ನನ್ನು ಬಂಧಿಸಿರುವುದಾಗಿ ಮಾಧ್ಯಮ ಪ್ರಕಟಣೆಯ ಮೂಲಕ ಸಿಬಿಐ ಮಾಹಿತಿ ನೀಡಿದೆ.
ಸಿಬಿಐನ ಜಾಗತಿಕ ಕಾರ್ಯಾಚರಣೆ ಘಟಕ ಮತ್ತು ಎನ್‌ಐಎ ಸಂಘಟಿತ ಪ್ರಯತ್ನದಿಂದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಒದಗಿಸಿದ್ದ. ಸ್ಫೋಟಕಗಳನ್ನು ಕ್ರೋಢೀಕರಿಸುವ ಕೆಲಸದಲ್ಲಿ ಸಲ್ಮಾನ್ ರೆಹಮಾನ್ ಖಾನ್ ನಿರತನಾಗಿದ್ದ.
ಸಲ್ಮಾನ್ ರೆಹಮಾನ್ ಖಾನ್ 2018ರಿಂದ 2022ರವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಆತನಿಗೆ ಭಯೋತ್ಪಾದಕ ಪ್ರಕರಣಗಳ ಆರೋಪಿ ಟಿ.ನಾಸೀರ್ ಪರಿಚಯವಾಗಿತ್ತು. ಜೈಲಿನಲ್ಲಿ ಸಲ್ಮಾನ್ ರೆಹಮಾನ್ ಖಾನ್ ಸೇರಿದಂತೆ ಕೆಲ ಸಹ ಕೈದಿಗಳನ್ನ ಬೈನ್ ವಾಶ್ ಮಾಡಿದ್ದ ನಾಸೀರ್, ರೆಹಮಾನ್‌ನನ್ನು ಭಯೋತ್ಪಾದನೆಯೆಡೆಗೆ ಸೆಳೆದಿದ್ದ ಎಂದು ಸಿಬಿಐ ಹೇಳಿದೆ.
ರೆಹಮಾನ್ ಶಿಕ್ಷೆ ಮುಗಿಸಿ ಹೊರಬಂದ ಬಳಿಕ ಉಗ್ರ ಚಟುವಟಿಗಳಿಗೆ ಸಹಾಯ ಮಾಡುತ್ತಿದ್ದ. ಟಿ.ನಾಸೀರ್ ಅಣತಿಯಂತೆ ಸಹಚರರ ಸಹಾಯದಿಂದ ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳನ್ನು ಸಂಘಟಿಸಲು ತೊಡಗಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ರೆಹಮಾನ್ ಖಾನ್ ಪರಾರಿಯಾಗಿದ್ದ.
ಈತನ ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್‌ಐಎ ಅಧಿಕಾರಿಗಳು ಸಿಬಿಐಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ರುವಾಂಡದಲ್ಲಿ ಉಗ್ರ ಸಲ್ಮಾನ್ ರೆಹಮಾನ್ ಬಂಧಿಸಿ ಇದೀಗ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
Armistice ಇಸ್ರೇಲ್- ಹೆಜ್ಬೊಲ್ಲಾ ನಡುವಿನ ಸಂಘರ್ಷಕ್ಕೆ ಅಲ್ಪ ವಿರಾಮ, ಲೆಬನಾನ್ ಜನ ನಿಟ್ಟುಸಿರು
Gold and Silver Price ಚಿನ್ನ ತುಸು ಅಗ್ಗ, ಬೆಳ್ಳಿ ಬೆಲೆಯಲ್ಲಿಲ್ಲ ವ್ಯತ್ಯಾಸ