Terrorist firing ಪ್ರಯಾಣಿಕ ವಾಹನಗಳ ಮೇಲೆ ಉಗ್ರರ ಗುಂಡಿನ ದಾಳಿ: ಮಕ್ಕಳು ಸೇರಿ‌ ಕನಿಷ್ಟ 38‌ ಜನ ಸಾವು

newsics.com ಇಸ್ಲಾಮಾಬಾದ್: ಭಯೋತ್ಪಾದಕರು ಗುರುವಾರ ಪ್ರಯಾಣಿಕರ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ 38 ಜನರು ಮೃತಪಟ್ಟು, 29 ಮಂದಿ ಗಾಯಗೊಂಡ ಘಟನೆ ವಾಯವ್ಯ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ನದೀಮ್ ಅಸ್ಲಂ ಚೌಧರಿ ಈ‌ ಮಾಹಿತಿ ನೀಡಿದ್ದಾರೆ. ಕುರ್ರಾಮ್ ಬುಡಕಟ್ಟು ಜಿಲ್ಲೆಯಲ್ಲಿ ಸಂಭವಿಸಿದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಮಹಿಳೆ ಮತ್ತು ಮಕ್ಕಳು ಸೇರಿದ್ದಾರೆ. ಇದು ದೊಡ್ಡ ದುರಂತ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಚೌಧರಿ ತಿಳಿಸಿದ್ದಾರೆ. … Continue reading Terrorist firing ಪ್ರಯಾಣಿಕ ವಾಹನಗಳ ಮೇಲೆ ಉಗ್ರರ ಗುಂಡಿನ ದಾಳಿ: ಮಕ್ಕಳು ಸೇರಿ‌ ಕನಿಷ್ಟ 38‌ ಜನ ಸಾವು