ಪ್ರಧಾನಿ ಮೋದಿ ಇದ್ದ ವಿಮಾನದಲ್ಲಿ ತಾಂತ್ರಿಕ ದೋಷ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಂದು ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ದಿಯೋಗರ್‌ಗೆ ಬಂದಿದ್ದರು. ಚುನಾವಣಾ ಭಾಷಣವನ್ನು ಮುಗಿಸಿ ದಿಯೋಗರ್‌ ಏರ್‌ಪೋರ್ಟ್‌ಗೆ ಹೋಗಿ ವಿಮಾನವೇರಿದ್ದರು. ಈ ವೇಳೆ ಅವರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಇದ್ದ ವಿಮಾನ ದಿಯೋಗರ್‌ ಏರ್‌ಪೋರ್ಟ್‌ನಲ್ಲಿಯೇ ಇದ್ದು, ಪ್ರಧಾನಿ ಮೋದಿ ನವದೆಹಲಿಗೆ ತೆರಳುವುದು ಕೆಲಕಾಲ ತಡವಾಗಲಿದೆ ಎಂದು ತಿಳಿದುಬಂದಿದೆ.