newsics.com
ಬೆಂಗಳೂರು : ನಗ್ನ ಸ್ಥಿತಿಯಲ್ಲಿ ಕೊಳೆತ ಅಪರಿಚಿತ ಮಹಿಳೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಆನೇಕಲ್ ನ ಸರ್ಜಾಪುರ ಕೋಟೆ ಬೀದಿಯಲ್ಲಿ ನಡೆದಿದೆ.
ಕಿರಾತಕರು ಮಹಿಳೆ ಕೊಂದು ವೈರ್ ನಿಂದ ಕೈಕಾಲು ಕಟ್ಟಿ, ಬಳಿಕ ಚರಂಡಿಯಲ್ಲಿ ತುರುಕಿ ಪರಾರಿ ಆಗಿದ್ದಾರೆ. ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು ಐದಾರು ದಿನಗಳ ಹಿಂದೆ ಕೋಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ.
ಜನ ವಸತಿ ಪ್ರದೇಶದಲ್ಲೇ ದುಷ್ಕರ್ಮಿಗಳು ಕೊಲೆಗೈದಿದ್ದು, ಘಟನಾ ಸ್ಥಳಕ್ಕೆ ಶ್ವಾನ ದಳದಿಂದ ಪರಿಶೀಲನೆ ನಡೆದಿದೆ. ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.