ಭುವನೇಶ್ವರಿ ಪ್ರತಿಮೆ ಭಗ್ನಗೊಳಿಸಿ ವಿಕೃತಿ!

newsics.com ಬೆಂಗಳೂರು: ಲಕ್ಷ್ಮೀ ಭುವನೇಶ್ವರಿ ದೇವರ ವಿಗ್ರಹ ವಿರೂಪಗೊಳಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ 4 ಗಂಟೆ ಸುಮಾರಿಗೆ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಾಣದಂತೆ ಮುಖ ಮುಚ್ಚಿಕೊಂಡು ಬಂದು ದೇವರ ವಿಗ್ರಹ ವಿರೂಪಗೊಳಿಸಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಸ್ಥಳೀಯರು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲಿಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.