newsics.com
ಬೆಂಗಳೂರು; ರಾಜ್ಯದ ಜನರಿಗೆ ಮತ್ತೊಂದು ಸೆಸ್ ಸಂಕಷ್ಟ ಎದುರಾಗೋದು ಬಹುತೇಕ ಖಚಿತವಾಗಿದೆ. ಹೌದು, ಕುಡಿಯೋ ನೀರಿಗೂ ರಾಜ್ಯ ಸರ್ಕಾರ ಸೆಸ್ ವಿಧಿಸೋಕೆ ಪ್ಲಾನ್ ಮಾಡಿರೋದು ನಗರವಾಸಿಗಳ ಜೇಬಿಗೆ ಕತ್ತರಿ ಹಾಕೋ ಮುನ್ಸೂಚನೆ ನೀಡಿದೆ.
ತಿನ್ನೋ ಆಹಾರ, ಕುಡಿಯೋ ಎಣ್ಣೆ ಹೀಗೆ ಇನ್ನೂ ಹಲವು ವಸ್ತುಗಳ ಮೇಲೆ ಸೆಸ್ ವಿಧಿಸುತ್ತಿದ್ದ ಸರ್ಕಾರ, ಸದ್ಯ ನೀರಿನ ಬಿಲ್ನಲ್ಲೂ ಸೆಸ್ ಹಾಕಲು ಪ್ಲಾನ್ ಮಾಡಿದೆ. ಇನ್ನು ಜೀವವೈವಿಧ್ಯತೆಯ ತಾಣ ಪಶ್ಚಿಮಘಟ್ಟ ಹಲವು ನದಿಗಳ ಮೂಲವಾಗಿದ್ದು, ಈ ನದಿಗಳ ನೀರು ಪೂರೈಕೆಯಾಗುವ ನಗರಗಳಿಗೆ ಹಸಿರು ಸೆಸ್ ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ನೀರಿನ ಬಳಕೆಯ ಬಿಲ್ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ, ಕಾಪು ನಿಧಿ ಸ್ಥಾಪಿಸಿದರೆ, ಈ ಹಣವನ್ನ ಪಶ್ಚಿಮಘಟ್ಟ ಅಭಿವೃದ್ಧಿ ವೃಕ್ಷ ಸಂವರ್ಧನೆಗಾಗಿ ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟಕ್ಕೆ ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು ಎಂಬುದು ಅರಣ್ಯ ಇಲಾಖೆ ಪ್ಲಾನ್ ಆಗಿದೆ.