newsics.com
ಬೆಂಗಳೂರು : ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ತ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ- ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 13 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದರು.
12 ಮುದ್ದೆ ನುಂಗಿ ದ್ವಿತೀಯ ಸ್ಥಾನ ಪಡೆದ ಮಾಲೂರಿನ ಸಂಪಗೆರೆ ಶ್ರೀನಿವಾಸ್ ಅವರು ಕುರಿ ಹಾಗೂ ಮಹಿಳಾ ವಿಭಾಗದಲ್ಲಿ 8 ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದ ಚಂದ್ರಕಲಾ ಸಿ.ಜಿ ಅವರು ಮಿಕ್ಸರ್ ಗ್ರೈಂಡರ್ ಅನ್ನು ಬಹುಮಾನವಾಗಿ ಪಡೆದರು.
ಮಂಡ್ಯ, ಕುಣಿಗಲ್, ಹಾಸನ, ದಾವಣಗೆರೆ ಹೊಸಕೋಟೆ, ಮಾಲೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮುದ್ದೆ 250 ಗ್ರಾಂ ತೂಕ ಹೊಂದಿದ್ದು, ಸ್ಪರ್ಧೆಗೆ 45 ನಿಮಿಷಗಳ ಕಾಲ ಮಿತಿ ನಿಗದಿಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್, ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು