ಸರ್ಕಾರಿ ಆದೇಶ ಹೊರಬಿದ್ದ ಬೆನ್ನಲ್ಲೇ ವಿಧಾನಸೌಧ ಗಾರ್ಡನ್‌ನಲ್ಲಿ ಬಿಯರ್ ಬಾಟಲ್‌ಗಳು ಪತ್ತೆ!

newsics.com ಬೆಂಗಳೂರು: ಸರ್ಕಾರಿ ಕಚೇರಿ‌ ಆವರಣದಲ್ಲಿ ಮದ್ಯ,‌ಮಾದಕವಸ್ತು ನಿಷೇಧಿಸಿ ಹೊರಡಿಸಿದ ಮರುದಿನವೇ ವಿಧಾನಸೌಧದ ಆವರಣದಲ್ಲಿರುವ ಗಾರ್ಡನ್‌ನಲ್ಲಿ ಬಿಯರ್ ಬಾಟಲ್‌ಗಳು ಪತ್ತೆಯಾಗಿವೆ. ವಿಧಾನಸೌಧದ ಪಶ್ಚಿಮ ಭಾಗದ ಗಾರ್ಡನ್‌ನಲ್ಲಿ ಬಿಯರ್ ಬಾಟಲ್‌ಗಳು ಬಿದ್ದಿರುವುದು ಪತ್ತೆಯಾಗಿದ್ದು, ಇದು ಭದ್ರತಾ ವೈಫಲ್ಯವೋ ಅಥವಾ ದುರುದ್ದೇಶಪೂರ್ವಕವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ರಾಜ್ಯ ಸರ್ಕಾರ ನಿನ್ನೆಯಷ್ಟೇ ಸರ್ಕಾರಿ ಕಚೇರಿ ಆವರಣ, ಸುತ್ತಮುತ್ತ ಯಾವುದೇ ಮಾದಕ ವಸ್ತುಗಳು, ಮದ್ಯ ಕೊಂಡೊಯ್ಯಬಾರದು ಎಂದು ಆದೇಶ ಹೊರಡಿಸಿತ್ತು. ಆದೇಶ ಹೊರಡಿಸಿದ ಒಂದು ದಿನದ ಅಂತರದಲ್ಲೇ ರಾಜ್ಯದ ಶಕ್ತಿಸೌಧ ವಿಧಾನಸೌಧದ ಗಾರ್ಡನ್‌ನಲ್ಲಿಯೇ … Continue reading ಸರ್ಕಾರಿ ಆದೇಶ ಹೊರಬಿದ್ದ ಬೆನ್ನಲ್ಲೇ ವಿಧಾನಸೌಧ ಗಾರ್ಡನ್‌ನಲ್ಲಿ ಬಿಯರ್ ಬಾಟಲ್‌ಗಳು ಪತ್ತೆ!