newsics.com
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ.
2005ರಲ್ಲಿ ತೆರೆಕಂಡ ನಾಗಾರ್ಜುನ ನಟನೆಯ ‘ಸೂಪರ್’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು ಬಳಿಕ ‘ಮಹಾನಂದಿ’ ‘ ಅಸ್ತ್ರಮ್’ ‘ವಿಕ್ರಮಾರ್ಕುಡು’ ಸೇರಿದಂತೆ ಬ್ಯಾಕ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು.
ನಟಿ ಅನುಷ್ಕಾ ಶೆಟ್ಟಿ 2007 ರಂದು ಸುಂದರ್ ನಿರ್ದೇಶನದ ‘ರೆಂದು’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಳೆದ ವರ್ಷ ‘ಮಿಸ್ ಶೆಟ್ಟಿ ಶ್ರೀ ಪೋಲಿಶೆಟ್ಟಿ’ ನಲ್ಲಿ ಕಾಣಿಸಿಕೊಂಡಿದ್ದ ಇವರು ಇತ್ತೀಚಿಗೆ ‘ಘಾಟಿ’ ಹಾಗೂ ‘ಕಥನಾರ್ – ದಿ ವೈಲ್ಡ್ ಸೋರ್ಸೆರರ್’ ಶೂಟಿಂಗಲ್ಲಿ
ಅನುಷ್ಕಾ ಶೆಟ್ಟಿ ಅವರು ಪ್ರಭಾಸ್ ಜೊತೆ ರಿಲೇಶನ್ಶಿಪ್ನಲ್ಲ ಇದ್ದರು ಎನ್ನಲಾಗಿದೆ. ಹಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ‘ಬಾಹುಬಲಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇವರ ಸಂಬಂಧದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಆ ಬಳಿಕ ಇವರು ಮದುವೆ ಆಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಬ್ರೇಕಪ್ನಲ್ಲಿ ಇವರ ಸಂಬಂಧ ಕೊನೆ ಆಯಿತು.
ಅನುಷ್ಕಾ ಶೆಟ್ಟಿ ಅವರು ಹಿರಿಯ ನಟನ ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿ ಹಬ್ಬಿತ್ತು. ಈ ಕಾರಣದಿಂದಲೇ ಪ್ರಭಾಸ್ ಹಾಗೂ ಅನುಷ್ಕಾ ಬೇರೆ ಆದರು ಎನ್ನುವ ವದಂತಿ ಇದೆ. ಇದು ನಿಜ ಅಲ್ಲ ಎನ್ನುತ್ತವೆ ಕೆಲವು ವರದಿಗಳು. ಈ ರೀತಿಯ ವದಂತಿಗಳಿಂದ ಅನುಷ್ಕಾ ಸಾಕಷ್ಟು ಬೇಸರಗೊಂಡಿದ್ದು, ಮದುವೆ ಆಗದೇ ಇರುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.