ಡಿಸೆಂಬರ್‌ಗೆ ಸೂರ್ಯ ಮಿಷನ್ ಉಡಾವಣೆ

newsics.com ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯುರೋಪಿಯನ್ ಒಕ್ಕೂಟದ ಪ್ರೋಬಾ-3 ಸೂರ್ಯ ವೀಕ್ಷಣಾ ಮಿಷನ್‌ನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಲು ಸಜ್ಜಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ(ಸ್ವತಂತ್ರ ಉಸ್ತುವಾರಿ) ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಸೂರ್ಯನ ರಹಸ್ಯಗಳನ್ನು ಬಿಚ್ಚಿಡಲು ಯುರೋಪಿನ ವಿಜ್ಞಾನಿಗಳೊಂದಿಗೆ ಪಾಲುದಾರರಾಗಲಿದ್ದಾರೆ ಎಂದು ಜಿತೇಂದ್ರ ಸಿಂಗ್ ಹೇಳಿದರು. ಸೌರ ಅಂಚಿಗೆ ಹತ್ತಿರವಿರುವ ಸೂರ್ಯನ ಮಸುಕಾದ ಕರೋನಾವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿರುವ ಪ್ರೋಬಾ -3ನ್ನು ಇಸ್ರೋ ನಿರ್ವಹಿಸುವ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರಾಕೆಟ್‌ನಲ್ಲಿ … Continue reading ಡಿಸೆಂಬರ್‌ಗೆ ಸೂರ್ಯ ಮಿಷನ್ ಉಡಾವಣೆ