‘ಟೆಲಿ ಮನಸ್’ ಆ್ಯಪ್ ಬಿಡುಗಡೆ ಮಾಡಿದ ಸರ್ಕಾರ.!; ಏನಿದರ ವಿಶೇಷತೆ..?

newsics.com ಬೆಂಗಳೂರು : ಮಾನಸಿಕ ಸ್ವಾಸ್ಥ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರ ಟೆಲಿ ಮನಸ್ ಆ್ಯಪ್ ಬಿಡುಗಡೆ ಮಾಡಿದೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ʼಟೆಲಿ ಮನಸ್ʼ ಆ್ಯಪ್ ಸಹಕಾರಿಯಾಗಲಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಟೆಲಿಮನಸ್ ಆಯಪ್ ಲಭ್ಯವಿದ್ದು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗಲಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.