ದೇಶದ ಮೊದಲ ಬುಲೆಟ್ ರೈಲು ಮಾರ್ಗ ಕಾಮಗಾರಿ ವೇಳೆ ಅವಘಡ: ಮೂವರ ಸಾವು, ಓರ್ವನ ಸ್ಥಿತಿ ಗಂಭೀರ

newsics.com ಅಹಮ್ಮದಾಬಾದ್: ಭಾರತದ ಮೊದಲ ಬುಲೆಟ್ ರೈಲು ಮಾರ್ಗ ಕಾಮಗಾರಿ ವೇಳೆ ಸಂಭವಿಸಿದ ಅವಘಡದಲ್ಲಿ ಮೂವರು ಕಾರ್ಮಿಕರು‌ ಮೃತಪಟ್ಟಿದ್ದಾರೆ. ಮುಂಬೈ-ಅಹಮ್ಮದಾಬಾದ್ ಬುಲೆಟ್ ರೈಲಿನ ಹಳಿ ಕಾಮಗಾರಿಯಲ್ಲಿ ವೇಳೆ ತಾತ್ಕಾಲಿಕ ಗೋಡೆ ಕುಸಿತಗೊಂಡು ಈ ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಕಾರ್ಮಿಕನಿಗೆ ಚಿಕಿತ್ಸೆ ಮುಂದುವರಿದಿದೆ. ವಸಾದ್ ಗ್ರಾಮದ ಬಳಿ ದೇಶದ ಮೊದಲ ಬುಲೆಟ್ ರೈಲು ಹಳಿ ಕಾಮಗಾರಿ ಬಿರುಸಿನಿಂದ ಸಾಗುತ್ತಿತ್ತು. ಅಡಿಪಾಯಕ್ಕಾಗಿ ದೊಡ್ಡ ದೊಡ್ಡ ಕಾಂಕ್ರೀಟ್ ಬ್ಲಾಕ್ ಹಾಗೂ ಕಬ್ಬಿಣದ ಸರಕುಗಳನ್ನು ಇಡಲಾಗಿತ್ತು. ಕಾಮಗಾರಿ ಪಕ್ಕದಲ್ಲೇ ಈ … Continue reading ದೇಶದ ಮೊದಲ ಬುಲೆಟ್ ರೈಲು ಮಾರ್ಗ ಕಾಮಗಾರಿ ವೇಳೆ ಅವಘಡ: ಮೂವರ ಸಾವು, ಓರ್ವನ ಸ್ಥಿತಿ ಗಂಭೀರ