newsics.com
ಹೈದ್ರಾಬಾದ್ : ಮಲಯಾಳಂ ಕಿರುತೆರೆ ನಟರಾದ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಅವರು ಗುರುವಾಯೂರ್ ದೇವಸ್ಥಾನದಲ್ಲಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಪ್ತ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ವಿವಾಹದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿವೆ. ಸದ್ಯ ನಟಿಗೆ 38 ವರ್ಷ ವಯಸ್ಸಾಗಿದ್ದು, ಕ್ರಿಸ್ ವೇಣುಗೋಪಾಲ್ ಅವರಿಗೆ 49 ವರ್ಷವಾಗಿದೆ.
ಈ ಇಬ್ಬರ ಮಧ್ಯೆ 11 ವರ್ಷಗಳ ವಯಸ್ಸಿನ ಅಂತರವಿದೆ. ಇನ್ನು, ಮದುವೆಯಾಗುವ ಮುನ್ನವೇ 11 ವರ್ಷಗಳ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಸಾಕಷ್ಟು ಮಂದಿ ಹಲವಾರು ಕಮೆಂಟ್ಸ್ ಮಾಡಿದ್ದರು.