ಕೆಲಸದೊತ್ತಡ ತಾಳಲಾರದೆ ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮ*ಹತ್ಯೆ
newsics.com ಹೈದರಾಬಾದ್: ಕಚೇರಿ ಕೆಲಸದ ಒತ್ತಡ ತಾಳಲಾರದೆ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾವಾದ್‌ನ ಕೋಕಾಪೇಟೆಯಲ್ಲಿ ಈ ಘಟನೆ ನಡೆದಿದೆ. ಅವರು ಏಳು ಅಂತಸ್ತಿನ ಕಟ್ಟಡದ ಮೇಲಿನಿಂದ ಜಿಗಿದು ನಾಗ ಪ್ರಭಾಕರ್ ಸಾವನ್ನಪ್ಪಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಾಗ ಪ್ರಭಾಕರ್ ಆಂಧ್ರಪ್ರದೇಶ ಮೂಲದವರಾಗಿದ್ದು, ಗಚಿಬೌಲಿಯ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋಕಾಪೇಟೆಯ ಹಾಸ್ಟೆಲ್ ಕೋಣೆಗೆ ಬಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗ ಪ್ರಭಾಕರ್ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. … Continue reading ಕೆಲಸದೊತ್ತಡ ತಾಳಲಾರದೆ ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮ*ಹತ್ಯೆ
Copy and paste this URL into your WordPress site to embed
Copy and paste this code into your site to embed