newsics.com
ಹೈದರಾಬಾದ್: ಐಐಐಟಿ ಮೆಸ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪತ್ತೆಯಾಗಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇಂದು ಕದಂಬ ಮೆಸ್‌ನಲ್ಲಿ (ಐಐಐಟಿ ಹೈದರಾಬಾದ್) ನನ್ನ ಸ್ನೇಹಿತನ ಊಟದಲ್ಲಿ ಕಪ್ಪೆ ಕಂಡುಬಂದಿದೆ. ಇದನ್ನು ಒಪ್ಪಲಾಗದು ಮತ್ತು ಗಂಭೀರವಾದ ಆರೋಗ್ಯದ ಅಪಾಯವನ್ನು ಉಂಟುಮಾಡುತ್ತದೆ ಎಂದು @cfs_telangana , ದಯವಿಟ್ಟು ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ಟ್ವಿಟರ್ ಎಕ್ಸ್ ನಲ್ಲಿ ಬರೆದುಕೊಂಡಿರುವ ವಿದ್ಯಾರ್ಥಿ.
https://twitter.com/manoharrocksss/status/1846920038814830638
ಬಿರಿಯಾನಿಯಲ್ಲಿ ಸತ್ತ ಕಪ್ಪೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವೈರಲ್ ಆಗುತ್ತಿವೆ. ಇದೇ ತಿಂಗಳ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.