ಹೋಟೆಲ್ ಬಾಲ್ಕನಿಯಿಂದ ಬಿದ್ದು ಒನ್ ಡೈರೆಕ್ಷನ್ ಮಾಜಿ ಗಾಯಕ ಲಿಯಾಮ್ ಸಾವು

newsics.com ಬ್ಯೂನಸ್ ಐರಿಸ್(ಅರ್ಜೆಂಟೀನಾ): ಮಾಜಿ ಒನ್ ಡೈರೆಕ್ಷನ್ ಬ್ಯಾಂಡ್‌ನ ಗಾಯಕ ಲಿಯಾಮ್ ಪೇನ್(31) ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಬ್ಯೂನಸ್ ಐರಿಸ್‌ನ ಹೋಟೆಲ್‌ನ ಮೂರನೇ ಮಹಡಿಯಲ್ಲಿ ವಾಸವಿದ್ದ ಬ್ರಿಟಿಷ್‌ ಗಾಯಕ ಲಿಯಾಮ್ ತಮ್ಮ ಕೋಣೆಯ ಬಾಲ್ಕನಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಅರ್ಜೆಂಟೀನಾ ಪೊಲೀಸರು ಬುಧವಾರ ದೃಢಪಡಿಸಿದ್ದಾರೆ. ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೋಟೆಲ್ ಲಾಬಿಯಲ್ಲಿ ಗಾಯಕ ಲಿಯಾಮ್ ವಿಲಕ್ಷಣವಾಗಿ ವರ್ತಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಮ್ಮ ಲ್ಯಾಪ್ ಟಾಪ್ ಮುರಿದುಹಾಕಿದ್ದಾರೆ. ಮತ್ತೆ ಅವರನ್ನು ಹೋಟೆಲ್ ಕೋಣೆಗೆ ಕರೆದೊಯ್ಯಲಾಯಿತು ಎಂದು … Continue reading ಹೋಟೆಲ್ ಬಾಲ್ಕನಿಯಿಂದ ಬಿದ್ದು ಒನ್ ಡೈರೆಕ್ಷನ್ ಮಾಜಿ ಗಾಯಕ ಲಿಯಾಮ್ ಸಾವು