newsics.com
ಬೆಳಗಾವಿ: ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿ ರೇಣುಕಾ ಯಲ್ಲಮ್ಮ ದೇವಿಗೆ ಅರ್ಚನೆ ಮಾಡಿಸಿದ್ದಾರೆ.
ಇಂದು ಬೆಳಗಾವಿಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಬರುತ್ತಿದ್ದಂತೆ ಅರ್ಚಕರು ವಿಶೇಷ ಅರ್ಚನೆ ಮಾಡಿದ್ರು. ಆರತಿ ಆಗುವವರೆಗೆ ಗರ್ಭಗುಡಿಯಲ್ಲೇ ನಿಂತು ಸಿಎಂ ತಾಯಿಯ ದರ್ಶನ ಪಡೆದುಕೊಂಡರು. ಆರತಿ ತಟ್ಟೆಗೆ 500 ರೂ. ನೋಟು ಹಾಕಿದರು. ಈ ವೇಳೆ ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಣೆಗೆ ತಾವೇ ಕುಂಕುಮ ಹಚ್ಚಿಕೊಂಡಿದರು.
ಇನ್ನು ಗರ್ಭಗುಡಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಾಷ್ಟಾಂಗ ನಮಸ್ಕಾರ ಹಾಕಿದರು. ಯಲ್ಲಮ್ಮ ದೇವಿ ಸನ್ನಿಧಾನದಲ್ಲಿ ಶಾಸಕ ವಿಶ್ವಾಸ ವೈದ್ಯರಿಂದ ಸಿಎಂ ಮತ್ತು ಡಿಸಿಎಂಗೆ ಹೂವಿನ ಹಾರ ಹಾಕಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.