ಸಾಯಿಬಾಬಾ ಪ್ರತಿಮೆ ತೆರವು: ಹಿಂದೂ ಸಂಘಟನೆಯ ಮುಖ್ಯಸ್ಥ ಅರೆಸ್ಟ್
newsics.com ವಾರಣಾಸಿ: ವಾರಣಾಸಿಯ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವು ಅಭಿಯಾನ ನಡೆಸುತ್ತಿದ್ದ ಸ್ಥಳೀಯ ಹಿಂದೂ ಸಂಘಟನೆಯಾದ ಸನಾತನ ರಕ್ಷಕ ದಳದ ಮುಖ್ಯಸ್ಥನನ್ನು ಶಾಂತಿ ಭಂಗದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಯಿಬಾಬಾ ಮೂರ್ತಿಗಳನ್ನು ಸನಾತನ ರಕ್ಷಕ ದಳದ ಸದಸ್ಯರು ತೆರವುಗೊಳಿಸಿದ ನಂತರ ಸ್ಥಳೀಯ ಸಂಘಟನೆಯ ಮುಖ್ಯಸ್ಥ ಅಜಯ್ ಶರ್ಮಾರನ್ನು ಬಂಧಿಸಲಾಗಿದೆ. ಶಾಂತಿ ಭಂಗದ ಆರೋಪದ ಮೇಲೆ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್ ಹೇಳಿದ್ದಾರೆ.
Copy and paste this URL into your WordPress site to embed
Copy and paste this code into your site to embed