newsics.com
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ 3ನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಂಗಳವಾರ ನಿರ್ಧಾರವಾಗಲಿದೆ.
ಕಾಶ್ಮೀರ ವಿಭಾಗದ ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾ, ಜಮ್ಮು ವಿಭಾಗದಲ್ಲಿ ಜಮ್ಮು, ಉಧಂಪುರ, ಕಥುವಾ ಮತ್ತು ಸಾಂಬಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಜಮ್ಮು ಜಿಲ್ಲೆಯ ಅಖ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡದಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಕಾಶ್ಮೀರ ವಿಭಾಗದಲ್ಲಿ, ಕರ್ನಾಹ್, ಟ್ರೆಹ್ಗಾಮ್, ಕುಪ್ವಾರಾ, ಲೋಲಾಬ್, ಹಂದ್ವಾರಾ, ಲಂಗೇಟ್, ಸೋಪೋರ್, ರಫಿಯಾಬಾದ್, ಉರಿ, ಬಾರಾಮುಲ್ಲಾ, ಗುಲ್ಮಾರ್ಗ್, ವಾಗೂರಾ-ಕ್ರೀರಿ, ಪಟ್ಟಾನ್, ಸೋನಾವರಿ, ಬಂಡಿಪೋರಾ ಮತ್ತು ಗುರೇಜ್ (ಎಸ್‌ಟಿ) ಒಳಗೊಂಡ 16 ವಿಧಾನಸಭಾ ಕ್ಷೇತ್ರಗಳಿವೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 6ರವರೆಗೆ ನಡೆಯಲಿದೆ.