newsics.com
ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಹೊರವಲಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್‌ಗೆ ಇಂದು ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ 25 ಮಂದಿ ಸಾವನ್ನಪ್ಪಿದ್ದಾರೆ .
ಮಧ್ಯ ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಶೈಕ್ಷಣಿಕ ಪ್ರವಾಸಕ್ಕೆಂದು ಶಿಕ್ಷಕರು ಸೇರಿದಂತೆ 44 ಜನರು ಬಂದಿದ್ದರು. ಬ್ಯಾಂಕಾಕ್ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆ ಬಳಿ ಈ ಅವಘಡ ಸಂಭವಿಸಿದೆ.
ಘಟನಾ ಸ್ಥಳದ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ಆಂತರಿಕ ಸಚಿವ ಅನುಟಿನ್ ಚಾರ್ನ್‌ವಿರಾಕುಲ್ ಹೇಳಿದ್ದಾರೆ. ಆದರೆ ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.