ಟ್ಯಾಂಕರ್ ಪಲ್ಟಿ: ಸಾವಿರಗಟ್ಟಲೆ ಲೀಟರ್ ಹಾಲು ರಸ್ತೆ ಪಾಲು, ಬಿಂದಿಗೆ,‌ ಕ್ಯಾನ್‌ಗಳಲ್ಲಿ ಹಾಲು ತುಂಬಿಕೊಂಡ ಗ್ರಾಮಸ್ಥರು

newsics.com ಪಾವಗಡ(ತುಮಕೂರು): ಪಾವಗಡ ತಾಲೂಕಿನ ವಡ್ಡರಹಟ್ಟಿಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ಲಾರಿ ಚಾಲಕನ ರಕ್ಷಣೆ ಮರೆತು, ಬಿಂದಿಗೆ ಹಾಗೂ ಬಾಟಲಿಗಳಲ್ಲಿ ಹಾಲನ್ನು ತುಂಬಿಕೊಂಡು ಹೋಗಿದ್ದಾರೆ. ತಾಲೂಕಿನ ಬ್ಯಾಡನೂರು ಗುಂಡಾರ್ಲಹಳ್ಳಿ ನಡುವಿನ ರಸ್ತೆಯ ವಡ್ಡರಹಟ್ಟಿ ಬಳಿ ಟ್ಯಾಂಕರ್ ಪಲ್ಟಿಯಾಗಿದೆ. ರಸ್ತೆಯಲ್ಲಿ ಹಾಲಿನ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿರಯವಾಗ ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ಬ್ಯಾಡನೂರು ಗ್ರಾಮದಿಂದ ಹಾಲು ತುಂಬಿಕೊಂಡು ಪಾವಗಡದ ಕಡೆ ಬರುವಾಗ ಪಲ್ಟಿಯಾಗಿದೆ. ಗ್ರಾಮದ ರಸ್ತೆಯಲ್ಲಿ ಭಾರಿ ಸದ್ದು ಬಂದ … Continue reading ಟ್ಯಾಂಕರ್ ಪಲ್ಟಿ: ಸಾವಿರಗಟ್ಟಲೆ ಲೀಟರ್ ಹಾಲು ರಸ್ತೆ ಪಾಲು, ಬಿಂದಿಗೆ,‌ ಕ್ಯಾನ್‌ಗಳಲ್ಲಿ ಹಾಲು ತುಂಬಿಕೊಂಡ ಗ್ರಾಮಸ್ಥರು