ಸುರಕ್ಷಿತ ಸ್ಥಳಕ್ಕೆ ಇರಾನ್ ಅಯತೊಲ್ಲಾ ಖಮೇನಿ ಶಿಫ್ಟ್!
newsics.com ಟೆಹ್ರಾನ್: ಇಸ್ರೇಲಿ ರಕ್ಷಣಾ ಪಡೆ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನೇ ಹೊಡೆದುರುಳಿಸಿದೆ. ಇತ್ತ ಹಿಜ್ಬುಲ್ಲಾ ಮುಖ್ಯಸ್ಥನನ್ನೇ ಇಸ್ರೇಲ್ ಹೊಡೆದುರುಳಿಸಿರುವುದು ಇದೀಗ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಜೀವ ಭಯ ಶುರುವಾಗಿದೆ. ಹೀಗಾಗಿ ಖಮೇನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಹಸನ್ ನಸ್ರಲ್ಲಾ ಹತ್ಯೆಯನ್ನು ಇಸ್ರೇಲ್ ಘೋಷಿಸಿದ ನಂತರ ಮುಂದಿನ ಹಂತವನ್ನು ನಿರ್ಧರಿಸಲು ಇರಾನ್, ಹಿಜ್ಬುಲ್ಲಾ ಮತ್ತು ಇತರ ಪ್ರಾಕ್ಸಿ ಗುಂಪುಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.
Copy and paste this URL into your WordPress site to embed
Copy and paste this code into your site to embed