newsics.com
ಬೆಂಗಳೂರು: ಶಾಸಕ ಮುನಿರತ್ನ ಪ್ರಕರಣ ದಿನದಿಂದ ದಿನಕ್ಕೆ ಹಲವು ಆಯಾಮಗಳನ್ನು ಪಡೆಯುತ್ತಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿ ಆದೇಶ ಹೊರಡಿಸಿದೆ
ಪ್ರಕರಣಗಳ ತನಿಖೆಗೆ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಜಾತಿ ನಿಂದನೆ, ಜೀವ ಬೆದರಿಕೆ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಶಾಸಕ ಮುನಿರತ್ನರನ್ನು ನಿನ್ನೆ ಮತ್ತೆ ಪೊಲೀಸರು ಅತ್ಯಾಚಾರ ಆರೋಪದಲ್ಲಿ ಬಂಧಿಸಿದ್ದರು.
ಎರಡೆರಡು ಕೇಸ್ ಗಳಲ್ಲಿ ಮುನಿರತ್ನಗೆ ಜಾಮೀನು ಸಿಕ್ಕಿದ್ದು, ಇನ್ನೇನು ಹೊರಗೆ ಬರಬೇಕು ಎನ್ನುವಷ್ಟರಲ್ಲಿ ನಿನ್ನೆ ಅತ್ಯಾಚಾರ ಪ್ರಕರಣದ ಸುರುಳಿ ಸುತ್ತಿಕೊಂಡಿತ್ತು. ಇದೀಗ ಸಂತ್ರಸ್ತ್ರೆ ಕೊಟ್ಟ ದೂರು ಮುನಿರತ್ನರನ್ನ ಜೈಲಿಗಟ್ಟಿದೆ.