newsics.com
ಬೆಂಗಳೂರು : ಲಕ್ಮೀ ಬಾರಮ್ಮದಲ್ಲಿ ಚಿನ್ನು ಪಾತ್ರದ ಮೂಲಕ ಖ್ಯಾತಿ ಪಡೆದಿದ್ದ ನಟಿ ಕವಿತಾ ಗೌಡ ಮತ್ತು ಅವರ ಪತಿ ಚಂದನ್ ಗೌಡ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ.
ಗಂಡು ಮಗು ಹುಟ್ಟಿರುವ ವಿಚಾರವನ್ನುಸ್ವತಃ ಕವಿತಾ ಗೌಡ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಯುವರಾಜನ ಆಗಮನ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ನಟಿಯರಾದ ಮಿಲನಾ ನಾಗರಾಜ್ ಹಾಗೂ ಪ್ರಣೀತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಿಲನಾ ನಾಗರಾಜ್ ಹಾಗೂ ಕವಿತಾ ಗೌಡ ಅವರಿಗೆ ಇದು ಮೊದಲ ಮಗುವಾಗಿದ್ದರೆ, ಪ್ರಣೀತಾ ಸುಭಾಷ್‌ಗೆ ಇದು 2ನೇ ಮಗು. ಕೆಲ ಸಮಯದ ಹಿಂದೆ ಕವಿತಾ ಗೌಡ ತಮ್ಮ ಫೇಸ್‌ಬುಕ್ ಅಕೌಂಟ್ ಮೂಲಕ ಶುಭ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.