newsics.com
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕರ ಆಸ್ವತ್ರೆಗೆ ಎದೆನೋವು ಅಂತ ಆಸ್ಪತ್ರೆಗೆ ಬಂದ ನಕಲಿ ರೋಗಿಯೋರ್ವ ಮಾಡಿದ ಕೆಲಸ ನೋಡಿ ಸಿಬ್ಬಂದಿ ಜೊತೆಗೆ ಜನರು ಸಹ ಬೆಚ್ಚಿ ಬಿದ್ದಿದ್ದು, ಸರಿಯಾಗಿ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ
ಶಂಕರ್ ಎಂಬಾತ ಮೊದಲಿಗೆ ಆಸ್ವತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾನೆ. ಮನಗೆ ಹೋಗದೆ ನೇರವಾಗಿ ಆಸ್ಪತ್ರೆಯ ಮೊದಲನೇ ಮಹಡಿಗೆ ತೆರಳಿದ್ದು ಅಲ್ಲಿ ವಾರ್ಡ್ಗಳ ಒಳಗಡೆ ಹೋಗಿ ನಿದ್ದೆಗೆ ಜಾರಿರುವ ರೋಗಿಗಳ ಹಣ, ಮೊಬೈಲ್ ಮತ್ತು ಬೆಲೆ ಬಾಳುವ ವಸ್ತುಗಳನ್ನ ಎಗರಿಸುವ ಯತ್ನ ಮಾಡಿದ್ದಾನೆ.
ಆದರೆ ಈ ವೇಳೆ ರೋಗಿಯೊಬ್ಬರು ಎಚ್ಚೆತ್ತು ಯಾರು ನೀನು ಅಂತಿದ್ದಂತೆ ನಾನು ಆಸ್ಪತ್ರೆ ಸಿಬ್ಬಂದಿ ಡಾಕ್ಟರ್ ಎಂದು ಹೇಳಿ ಅಲ್ಲಿಂದ ಹೊರಗಡೆ ಬಂದಿದ್ದಾನೆ. ಹೀಗಾಗೆ ಅನುಮಾನಗೊಂಡ ಜನರು ಆರೋಪಿಯನ್ನ ಹಿಂಬಾಲಿಸಿದಾಗ ಕಳ್ಳತನ ಮಾಡಲು ಬಂದಿರುವುದು ಗೊತ್ತಾಗಿದ್ದು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.